ಮಾರ್ಚ್ 30ರ ನಾಳೆ ದೇಶದಾದ್ಯಂತ ಸಡಗರ ಸಂಭ್ರಮದಿಂದ ರಾಮನವಮಿಯನ್ನು ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇದರ ಮಧ್ಯೆ ಭಾರತೀಯ ರಿಸರ್ವ್ ಬ್ಯಾಂಕ್ ರಾಮನವಮಿ ಪ್ರಯುಕ್ತ ಕೆಲ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ಮಾರ್ಚ್ 30ರಂದು ರಜೆ ಘೋಷಿಸಿದೆ.
ಅಹಮದಾಬಾದ್, ಬೇಲಾಪುರ್, ಭೋಪಾಲ್, ಭುವನೇಶ್ವರ್ ಚಂಡೀಗಢ, ಡೆಹ್ರಾಡೂನ್, ಗ್ಯಾಂಗ್ಟಕ್, ಹೈದರಾಬಾದ್ – ತೆಲಂಗಾಣ, ಜೈಪುರ, ಕಾನ್ಪುರ, ಲಕ್ನೋ, ಮುಂಬೈ, ನಾಗಪುರ, ಪಾಟ್ನಾ, ರಾಂಚಿ ಹಾಗೂ ಶಿಮ್ಲಾದಲ್ಲಿ ಬ್ಯಾಂಕುಗಳಿಗೆ ರಜೆ ಇರಲಿದೆ.
ಬ್ಯಾಂಕುಗಳ ರಜಾ ದಿನಗಳು ಮತ್ತು ಎಲ್ಲಿ ಎಂಬುದರ ಸಂಪೂರ್ಣ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ವೆಬ್ ಸೈಟ್ https://www.rbi.org.in ನಲ್ಲಿ ಪ್ರಕಟಿಸಲಾಗಿದ್ದು, ಇನ್ನುಳಿದಂತೆ ಬೆಂಗಳೂರು, ಚೆನ್ನೈ, ಗೌಹಾಟಿ, ಅಗರ್ತಾಲ, ಐಜ್ವಾಲ್, ಅಮರಾವತಿ (ಆಂಧ್ರ ಪ್ರದೇಶ), ಇಂಪಾಲ, ಕೊಲ್ಕತ್ತಾ, ಜಮ್ಮು, ನವದೆಹಲಿ, ಪಣಜಿ, ರಾಯ್ಪುರ, ಶಿಲಾಂಗ್, ಶ್ರೀನಗರ ಮತ್ತು ತಿರುವನಂತಪುರಂನಲ್ಲಿ ಮಾರ್ಚ್ 30 ರಂದು ಬ್ಯಾಂಕುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.