ಬಾಂಗ್ಲಾ ಚಿತ್ರಮಂದಿರಗಳಲ್ಲಿ ʼಪಠಾಣ್ʼ ಅಬ್ಬರ; ‘ಜೂಮೇ ಜೋ’ ಹುಕ್ ಸ್ಟೆಪ್ ಹಾಕಿ ಫ್ಯಾನ್ಸ್ ಸಂಭ್ರಮ

ನಟ ಶಾರುಖ್ ಖಾನ್ ನಟನೆಯ ಸೂಪರ್ ಹಿಟ್ ಚಿತ್ರ ಪಠಾಣ್ ಬಾಂಗ್ಲಾದೇಶದಲ್ಲಿ ಬಿಡುಗಡೆಯಾಗಿದೆ. ಚಿತ್ರಮಂದಿರಗಳಲ್ಲಿ ಶಾರುಖ್ ಖಾನ್ ಅಭಿಮಾನಿಗಳು ಚಿತ್ರದ ಹಿಟ್ ಸಾಂಗ್ ‘ಜೂಮೇ ಜೋ ಪಠಾನ್’ ನ ಹುಕ್ ಸ್ಟೆಪ್ ಹಾಕಿ ಸಂಭ್ರಮಿಸಿದ್ದಾರೆ.

ಅಭಿಮಾನಿಗಳ ಗುಂಪು ಪರದೆ ಮುಂದೆ ಬಂದು ಸಾಮೂಹಿಕವಾಗಿ ಹಾಡು ಹಾಡುತ್ತಾ ಹೆಜ್ಜೆ ಹಾಕಿದೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಬಾಂಗ್ಲಾದೇಶದಲ್ಲಿ ಪಠಾನ್ ಬಿಡುಗಡೆಯಾಗುವ ಬಗ್ಗೆ ಅಧಿಕೃತ ಹೇಳಿಕೆಯನ್ನು ಚಿತ್ರದ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ಬಿಡುಗಡೆ ಮಾಡಿದೆ.

ಯಶ್ ರಾಜ್ ಫಿಲ್ಮ್ಸ್ ನ ನೆಲ್ಸನ್ ಡಿಸೋಜಾ ಹೇಳಿಕೆಯಲ್ಲಿ, “ಸಿನಿಮಾ ಯಾವಾಗಲೂ ರಾಷ್ಟ್ರಗಳು, ಜನಾಂಗಗಳು ಮತ್ತು ಸಂಸ್ಕೃತಿಗಳ ನಡುವೆ ಒಂದುಗೂಡಿಸುವ ಶಕ್ತಿಯಾಗಿದೆ. ಇದು ಗಡಿಗಳನ್ನು ಮೀರುತ್ತದೆ, ಜನರನ್ನು ಪ್ರೇರೇಪಿಸುತ್ತದೆ ಮತ್ತು ಜನರನ್ನು ಒಟ್ಟುಗೂಡಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ವಿಶ್ವಾದ್ಯಂತ ಐತಿಹಾಸಿಕ ವ್ಯವಹಾರವನ್ನು ಮಾಡಿರುವ ಪಠಾಣ್ ಈಗ ಬಾಂಗ್ಲಾದೇಶದಲ್ಲಿ ಪ್ರೇಕ್ಷಕರನ್ನು ರಂಜಿಸಲು ಅವಕಾಶವನ್ನು ಪಡೆಯುತ್ತದೆ ಎಂದು ನಾವು ಥ್ರಿಲ್ ಆಗಿದ್ದೇವೆ!” ಎಂದಿದ್ದಾರೆ.

1971 ರ ನಂತರ ಬಾಂಗ್ಲಾದೇಶದಲ್ಲಿ ಬಿಡುಗಡೆಯಾದ ಮೊದಲ ಹಿಂದಿ ಚಲನಚಿತ್ರ ಪಠಾನ್ ಆಗಿದೆ. ಜನವರಿಯಲ್ಲಿ ಬಿಡುಗಡೆಯಾದ ಪಠಾಣ್ ಬೆಳ್ಳಿತೆರೆಯಲ್ಲಿ ಮ್ಯಾಜಿಕ್ ಸೃಷ್ಟಿಸಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read