ನವದೆಹಲಿ: ದೇಶದ ಉದ್ಯೋಗ ಸೃಷ್ಟಿ ಕೇಂದ್ರಗಳ ಪಟ್ಟಿಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ಮೊದಲ ಸ್ಥಾನ ಪಡೆದುಕೊಂಡಿದೆ. ವೇತನ ಏರಿಕೆಯಲ್ಲಿಯೂ ಬೆಂಗಳೂರು ಉನ್ನತಸ್ಥಾನ ಪಡೆದಿದೆ ಎಂದು ವರದಿ ಎಂದು ಹೇಳಿದೆ.
ಟೀಮ್ ಲೀಸ್ ಬಿಡುಗಡೆ ಮಾಡಿರುವ 2024ನೇ ಸಾಲಿನ ವರದಿಯ ಅನ್ವಯ ಅತಿ ಹೆಚ್ಚಿನ ಉದ್ಯೋಗ ಸೃಷ್ಟಿಯಲ್ಲಿ ದೇಶದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಚೆನ್ನೈ ಎರಡನೇ ಸ್ಥಾನ, ನವದೆಹಲಿ ಮೂರನೇ ಸ್ಥಾನ ಪಡೆದುಕೊಂಡಿದೆ.
ಬೆಂಗಳೂರಿನಲ್ಲಿ ಉದ್ಯೋಗಿಗಳ ವಾರ್ಷಿಕ ವೇತನ ಏರಿಕೆ ಶೇಕಡ 9.3 ರಷ್ಟು ಇದ್ದು, ಇದು ಕೂಡ ದೇಶದಲ್ಲಿ ಅತಿಹೆಚ್ಚಿನ ಪ್ರಮಾಣವಾಗಿದೆ. ಬೆಂಗಳೂರಿನವರ ಸರಾಸರಿ ಮಾಸಿಕ ಆದಾಯ 29,500 ರೂಪಾಯಿಯಷ್ಟು ಇದ್ದು ಇದು ದೇಶದಲ್ಲಿ ಅತಿ ಹೆಚ್ಚಿನದಾಗಿದೆ. ಎರಡನೇ ಸ್ಥಾನದಲ್ಲಿರುವ ಚೆನ್ನೈ ಉದ್ಯೋಗಿಗಳ ಸರಾಸರಿ ಮಾಸಿಕ ವೇತನ 24.500 ವಾರ್ಷಿಕ ವೇತನ ಏರಿಕೆ ಶೇಕಡ 7.5 ರಷ್ಟು ಇದೆ.