ಬೆಂಗಳೂರು : ಬೆಂಗಳೂರಿಗರೇ ಇಂದು ರಸ್ತೆಗಿಳಿಯುವ ಮುನ್ನ ಎಚ್ಚರವಾಗಿರಿ..ಇಂದು ಬೆಂಗಳೂರಿನಲ್ಲಿ ಸಾಲು ಸಾಲು ಪ್ರತಿಭಟನೆ ನಡೆಯಲಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಇರಬೇಕು. ಹಲವು ಕಡೆ ಮಾರ್ಗ ಬದಲಾವಣೆಯಾಗಲಿದ್ದು, ಜನರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಲಿದೆ.
ಫ್ರೀಡಂ ಪಾರ್ಕ್ ನಲ್ಲಿ ಇಂದು ಪ್ರತಿಭಟನೆ, ರಾಜಭವನಚಲೋ ನಡೆಯಲಿದೆ.. ಸಂಯುಕ್ತ ಹೋರಾಟ ಸಮಿತಿ ಸೇರಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಲಿದ್ದು, .ಪ್ರತಿಭಟನೆ ಹಿನ್ನೆಲೆಯಲ್ಲಿ ಇಂದು ವಾಹನಗಳ ಸಂಚಾರ ಮಾರ್ಗ ಬದಲಾಗಲಿದೆ.
ಬಿ ಎಂ ಸರ್ಕಲ್ ಇಂದ ಫ್ರೀಡಂ ಪಾರ್ಕ್ ಮಾರ್ಗದಲ್ಲಿ ಹೋಗುವವರು ಮಹಾರಾಣಿ ಕಾಲೇಜು ಅಂಡರ್ ಪಾಸ್ ಮೂಲಕ ಸಂಚರಿಸಬೇಕು.ಫ್ರೀಡಂ ಪಾರ್ಕ್ ನಿಂದ ಕನಕದಾಸ ವರ್ತದ ಕಡೆ ಹೋಗಲು ಅವಕಾಶವಿಲ್ಲ. ಕೋಡೆ ಜಂಕ್ಷನ್ ಕಡೆಯಿಂದ ಕೆ ಆರ್ ಸರ್ಕಲ್ ಗೆ ಹೋಗುವವರು ಹಳೆ ಜೆಡಿಎಸ್ ಕಚೇರಿಯ ರಸ್ತೆಯ ಮೂಲಕ ಸಂಚರಿಸಲು ಸೂಚನೆ ನೀಡಲಾಗಿದೆ.
ಸುಬ್ಬಣ್ಣ ಜಂಕ್ಷನ್ನಿಂದ ಎಂ.ಟಿ.ಆರ್ ಜಂಕ್ಷನ್ ಕಡೆಗೆ ಬರುವ ರಸ್ತೆಯು ಹಾಲಿ ಏಕಮುಖ ಸಂಚಾರ ರಸ್ತೆಯಾಗಿದ್ದು ತಾತ್ಕಲಿಕವಾಗಿ ದ್ವಿಮುಖ ಸಂಚಾರ ರಸ್ತೆಯನ್ನಾಗಿ ಪರಿವರ್ತಿಸಲಾಗಿದ್ದು ಗಾಂಧಿನಗರ ಕಡೆಗೆ ಬರುವ ವಾಹನ ಸವಾರರು ಸದರಿ ರಸ್ತೆಯನ್ನು ಬಳಸುವಂತೆ ಕೋರಲಾಗಿದೆ.ಖೋಡೆ ಜಂಕ್ಷನ್ ನಿಂದ ಮಹಾರಾಣಿ ಜಂಕ್ಷನ್ ವರೆಗೆ, ವೈ ರಾಮಚಂದ್ರ ರಸ್ತೆ, ಕಾಳಿದಾಸ ರಸ್ತೆ, ಪ್ಯಾಲೇಸ್ ರಸ್ತೆ, ಕೆ.ಜಿ ರಸ್ತೆಗಳಲ್ಲಿ ಯಾವುದೇ ಮಾದರಿಯ ವಾಹನಗಳಿಗೆ ಪಾರ್ಕಿಂಗ್ಗೆ ಅನುಮತಿಸಲಾಗುವುದಿಲ್ಲ.