ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳಂಬಡ ಗ್ರಾಮದಲ್ಲಿ ಮಾಂಸಹಾರ ತ್ಯಜಿಸಿ ಬಕ್ರಿದ್ ಆಚರಣೆ ಮಾಡಲಾಗಿದೆ.
ಗ್ರಾಮಸ್ಥರ ನಿರ್ಣಯದಂತೆ ಮುಸ್ಲಿಂ ಬಾಂಧವರು ಮಾಂಸಾಹಾರ ತ್ಯಜಿಸಿ ಸಿಹಿ ತಿಂದು ಬಕ್ರಿದ್ ಹಬ್ಬವನ್ನು ಆಚರಿಸಿದ್ದಾರೆ. ಒಂದೇ ತಿಂಗಳಲ್ಲಿ ಗ್ರಾಮದ ಐವರು ಯುವಕರು ಮೃತಪಟ್ಟ ಹಿನ್ನೆಲೆಯಲ್ಲಿ ಧರ್ಮಾತೀತವಾಗಿ ಮಾಂಸಾಹಾರ ತ್ಯಜಿಸಲು ಗ್ರಾಮಸ್ಥರು ನಿರ್ಣಯಿಸಿದ್ದರು.
12 ದಿನ ಮಾಂಸಾಹಾರ ತ್ಯಜಿಸಿ ಗ್ರಾಮದ ದೇವತೆಗೆ ವಿಶೇಷ ಪೂಜೆ ಸಲ್ಲಿಸಲು ಗ್ರಾಮಸ್ಥರು ನಿರ್ಣಯ ಕೈಗೊಂಡಿದ್ದರು. ಅದರಂತೆ 10 ದಿನಗಳಿಂದ ಗ್ರಾಮಸ್ಥರು ಮಾಂಸಹಾರ ತ್ಯಜಿಸಿದ್ದರು. ಗ್ರಾಮಸ್ಥರ ನಿರ್ಣಯದಂತೆ ಇಂದು ಮುಸ್ಲಿಂ ಬಾಂಧವರು ಮಾಂಸಹಾರ ತ್ಯಜಿಸಿ ಸಿಹಿ ತಿಂದು ಸರಳವಾಗಿ ಬಕ್ರೀದ್ ಆಚರಿಸಿದ್ದಾರೆ.