ಬೆಂಗಳೂರು: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗಳಿಗೆ ಶಿಫಾರಸು ಮಾಡುವಾಗ ಒ.ಆರ್.ಎಸ್. ರೆಫರಲ್ ಅಂತರ್ಜಾಲ ವ್ಯವಸ್ಥೆಯನ್ನು ಮಾತ್ರ ಬಳಸುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಹೆಚ್ಚಿನ ಚಿಕಿತ್ಸೆಗೆ ಒ.ಆರ್.ಎಸ್. ಮೂಲಕ ರೆಫರ್ ಮಾಡುವುದು ಇನ್ನು ಮುಂದೆ ಕಡ್ಡಾಯವಾಗಿದೆ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಆದೇಶ ಹೊರಡಿಸಿದ್ದಾರೆ. 2023 ರಿಂದ ರೋಗಿಗಳ ಚಿಕಿತ್ಸೆ ಅಥವಾ ಹೆಚ್ಚಿನ ಚಿಕಿತ್ಸೆಗಾಗಿ ಉನ್ನತ ಆಸ್ಪತ್ರೆಗೆ ರೆಫರ್ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಒ.ಆರ್.ಎಸ್. ತಂತ್ರಾಂಶ ಬಳಸಬೇಕು. ಅಂತರ್ಜಾಲದ ಮೂಲಕ ಮಾತ್ರ ರೆಫರ್ ಮಾಡಲು ಮಾಡಬೇಕು ಎಂದು ಎಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ಆರೋಗ್ಯ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ತಾಂತ್ರಿಕ ಅಥವಾ ಬೇರೆ ಯಾವುದೇ ಕಾರಣಗಳಿಂದ ಮೂಲಕ ರೆಫರ್ ಮಾಡಲು ಸಾಧ್ಯವಾಗದಿದ್ದರೆ ಮೆಡಿಕಲ್ ಮ್ಯಾನೇಜ್ಮೆಂಟ್ ಸ್ಯಾಟ್ ಅನುಮತಿ ಪಡೆದ ನಂತರ ಸ್ಯಾಟ್ ಸಿದ್ಧಪಡಿಸಿದ ಹಸ್ತಪ್ರತಿ ರೆಫರಲ್ ನಮೂನೆಯನ್ನು ಬಳಸಲು ಅವಕಾಶ ನೀಡಲಾಗಿದೆ. ಇದರ ಹೊರತಾಗಿ ಇನ್ನು ಮುಂದೆ ಹೆಚ್ಚಿನ ಚಿಕಿತ್ಸೆಗೆ ಒ.ಆರ್.ಎಸ್. ಮೂಲಕ ರೆಫರ್ ಮಾಡುವುದು ಕಡ್ಡಾಯವಾಗಿದೆ ಎಂದು ಹೇಳಲಾಗಿದೆ.