ಮನೆಯಲ್ಲಿ ಲಕ್ಷ್ಮಿ ಪೂಜೆ ಇಟ್ಕೊಂಡಿದಿರಾ……? ಹಾಗಿದ್ರೆ ಇದನ್ನೋದಿ

ತಾಯಿ ಲಕ್ಷ್ಮಿಯನ್ನು ಸಂತೋಷಗೊಳಿಸೋದು ಸುಲಭವಲ್ಲ. ಭಕ್ತರ ಭಕ್ತಿಗೆ ಮೆಚ್ಚಿ ಲಕ್ಷ್ಮಿ ಆಶೀರ್ವಾದ ನೀಡಿದ್ರೆ ಮಾತ್ರ ಬಾಳು ಬಂಗಾರ. ಈಗ ದೀಪಾವಳಿ ಹಬ್ಬ ಬರ್ತಿದೆ. ಹಬ್ಬದ ಸಮಯದಲ್ಲಿ ತಾಯಿ ಲಕ್ಷ್ಮಿ ಪೂಜೆಯನ್ನು ಜನರು ಅದ್ಧೂರಿಯಾಗಿ ಮಾಡ್ತಾರೆ. ನೀವೂ ಲಕ್ಷ್ಮಿ ಪೂಜೆ ಮಾಡುವವರಾಗಿದ್ದರೆ ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಿ. ಇದ್ರಿಂದ ಲಕ್ಷ್ಮಿ ಪ್ರಸನ್ನಳಾಗುವುದಲ್ಲದೆ ಮನೆಯಲ್ಲಿ ಸದಾ ಸಂಪತ್ತು, ಸಂತೋಷ ನೆಲೆಸಿರುತ್ತದೆ.

ಲಕ್ಷ್ಮಿ ಪೂಜೆಯಲ್ಲಿ ಈ ವಿಷ್ಯ ನೆನಪಿಡಿ :

ಮನೆಯ ಸ್ವಚ್ಛತೆ : ಲಕ್ಷ್ಮಿ ಪೂಜೆಗೆ ಮುನ್ನ ನೀವು ಮನೆಯನ್ನು ಸ್ವಚ್ಛಗೊಳಿಸಲು ಮರೆಯಬೇಡಿ. ಲಕ್ಷ್ಮಿ ಸ್ವಚ್ಛ ಪರಿಸರವನ್ನು ಇಷ್ಟಪಡ್ತಾಳೆ. ಅಲ್ಲಿಯೇ ನೆಲೆಸುತ್ತಾಳೆ. ಆಕೆ ಅನುಗ್ರಹ ಬೇಕು ಎನ್ನುವವರು ಮನೆಯನ್ನು ಕ್ಲೀನ್‌ ಮಾಡಿಯೇ ಲಕ್ಷ್ಮಿ ಪೂಜೆ ಶುರು ಮಾಡಿ.

ಈ ಜಾಗದಲ್ಲಿ ಪೂಜೆ ಮಾಡಿ : ಲಕ್ಷ್ಮಿ ಪೂಜೆಯನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಮಾಡಿ. ವಿಗ್ರಹವನ್ನು ಪೂರ್ವಾಭಿಮುಖವಾಗಿ ಇಡಿ.

ಆರತಿ ಬೆಳಗಲು ಮರೆಯಬೇಡಿ : ಆರತಿ ಇಲ್ಲದೆ ಪೂಜೆ ಅಪೂರ್ಣ. ಹಾಗಾಗಿ ಪೂಜೆ ಶುರು ಮಾಡುವ ಮೊದಲೇ ಆರತಿಗೆ ಅಗತ್ಯವಿರುವ ಎಲ್ಲ ವಸ್ತುಗಳನ್ನು ಸಿದ್ಧಪಡಿಸಿ. ತುಪ್ಪದ ದೀಪವನ್ನು ತಾಯಿಯ ಮುಂದೆ ಹಚ್ಚಿ. ಹೂ, ಹಣ್ಣು, ಸಿಹಿ ತಿಂಡಿ, ಪ್ರಸಾದ, ಆರತಿ ಎಲ್ಲವನ್ನೂ ಸಿದ್ಧಪಡಿಸಿ.

ಈ ಮೂರ್ತಿ ಬಳಕೆ ಮಾಡಿ : ತಾಯಿ ಲಕ್ಷ್ಮಿಯ ವಿಗ್ರಹ ಇಟ್ಟು ಪೂಜೆ ಮಾಡುವವರು ನೀವಾಗಿದ್ದರೆ ಮಣ್ಣಿನ ಅಥವಾ ಬೆಳ್ಳಿಯ ವಿಗ್ರಹವನ್ನು ಬಳಸಿ. ಪೂಜೆಗೆ ಗಾಜಿನ ವಿಗ್ರಹ ಬಳಸಬೇಡಿ.

ಈ ಸಮಯದಲ್ಲಿ ಪೂಜೆ ಮಾಡಿ : ನೀವು ಲಕ್ಷ್ಮಿಯನ್ನು ಪ್ರದೋಷ ಕಾಲದಲ್ಲಿ ಪೂಜಿಸಬೇಕು. ಸೂರ್ಯಾಸ್ತದ ನಂತರ ಮತ್ತು ರಾತ್ರಿಯ ಮೊದಲು ಗಳಿಕೆಯನ್ನು ಒಳ್ಳೆಯ ಸಮಯ ಎನ್ನಲಾಗುತ್ತದೆ.

ಗಣೇಶನ ಆರಾಧನೆ : ಲಕ್ಷ್ಮಿ ಪೂಜೆ ಮಾಡುವ ಮೊದಲು ಗಣಪತಿ ಪೂಜೆ ಮಾಡಬೇಕು. ಪೂಜೆಯಲ್ಲಿ ಯಾವುದೇ ವಿಘ್ನವಾಗದಂತೆ ವಿಘ್ನೇಶ್ವರದ ಆರಾಧನೆ ಮಾಡಿ ನಂತ್ರ ಲಕ್ಷ್ಮಿ ಪೂಜೆ ಮಾಡಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read