ತ್ವಚೆ ಬಿರುಕು ಬಿಡುವ ಸಮಸ್ಯೆಗೆ ಕ್ರೀಮ್ ಗಳ ಬಳಕೆಯ ಹೊರತಾಗಿ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದಲೂ ಪರಿಹಾರ ಕಂಡುಕೊಳ್ಳಬಹುದು. ಅದು ಹೇಗೆ ಎಂದಿರಾ?
ಆಲ್ಕೋಹಾಲ್ ಸೇವಿಸುವುದನ್ನು ಸಂಪೂರ್ಣ ನಿಲ್ಲಿಸಿ. ಚಳಿಗಾಲದಲ್ಲಿ ಬೆಚ್ಚಗಿರಬಹುದು ಎಂಬ ಕಾರಣಕ್ಕೆ ರಾತ್ರಿ ಮಲಗುವ ಮುನ್ನ ಕುಡಿಯುವ ಅಭ್ಯಾಸ ನಿಮಗಿದ್ದರೆ ಮೊದಲು ಅದನ್ನು ನಿಲ್ಲಿಸಿ. ಇದರಿಂದ ದೇಹದ ನೀರಿನಂಶ ಪೂರ್ತಿ ಹೊರಹೋಗಿ ತ್ವಚೆ ಒಣಗಿದಂತೆ, ಸುಕ್ಕಾದಂತೆ ಕಾಣುತ್ತದೆ.
ಹೆಚ್ಚು ಉಪ್ಪು ಬೆರೆತಿರುವ ತಿನಿಸುಗಳಿಂದ ದೂರವಿರಿ. ಉದಾಹರಣೆಗೆ ಉಪ್ಪಿನಕಾಯಿ. ಚಳಿಗಾಲದಲ್ಲಿ ಹೆಚ್ಚು ಉಪ್ಪಿನಕಾಯಿ ಸೇವಿಸಿದರೆ ತ್ವಚೆ ಹೆಚ್ಚು ಹೆಚ್ಚು ಬಿರುಕುಬಿಡುತ್ತದೆ. ಮತ್ತು ನೀವು ಹೆಚ್ಚು ವಯಸ್ಸಾದಂತೆಯೂ ಕಾಣಿಸುವಿರಿ.
ಅದೇ ರೀತಿ ಹೆಚ್ಚು ಸಕ್ಕರೆ ಬೆರೆಸಿದ ತಿನಿಸುಗಳನ್ನೂ ಸೇವಿಸದಿರಿ. ಇದರಿಂದ ದೇಹದಲ್ಲಿ ಪ್ರೊಟೀನ್ ಕಡಿಮೆಯಾಗಿ ತ್ವಚೆ ದೃಢತೆ ಮತ್ತು ಆಕಾರವನ್ನು ಕಳೆದುಕೊಂಡೀತು. ಸಕ್ಕರೆ ತ್ವಚೆಯನ್ನು ಒಣಗಿಸುತ್ತದೆ ಎಂಬುದು ನೆನಪಿರಲಿ.
ಸಂಸ್ಕರಿಸಿದ ಆಹಾರಗಳು, ಕಾಫಿ, ವಿಟಮಿನ್ ಎ ಹೆಚ್ಚಿರುವ ತಿನಿಸುಗಳಿಂದ ದೂರವಿದ್ದಷ್ಟು ಒಳ್ಳೆಯದು.