ಕೋವಿಡ್ -19 ಸಾಂಕ್ರಾಮಿಕವು ಪ್ರತಿಯೊಬ್ಬರ ಜೀವನದಲ್ಲಿ ಹಲವಾರು ಬದಲಾವಣೆಗಳನ್ನು ತಂದಿದೆ. ಹಲವಾರು ಮಂದಿ ಮನೆಯಿಂದ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಕಚೇರಿಯ ಜೊತೆ ಸಂಪರ್ಕದಲ್ಲಿರಲು ಮತ್ತು ವರ್ಚುವಲ್ ಸಭೆಗಳನ್ನು ನಡೆಸಲು ಜೂಮ್ ಮತ್ತು ಮೈಕ್ರೋಸಾಫ್ಟ್ ತಂಡಗಳಂತಹ ಪ್ಲಾಟ್‌ಫಾರ್ಮ್‌ಗಳನ್ನು ಬಳಸಲಾಗಿದೆ.
ಇದಕ್ಕೆ ಸಂಬಂಧಿಸಿದ ಹಾಸ್ಯದ ವಿಡಿಯೋಗಳು ಇದಾಗಲೇ ಸಾಕಷ್ಟು ವೈರಲ್ ಆಗಿವೆ.
ಇದೀಗ ಟಿವಿಯೊಂದರಲ್ಲಿ ಸಂದರ್ಶನಕ್ಕೆ ಆನ್ಲೈನ್ ಮೂಲಕ ಹಾಜರಾಗಿದ್ದ ಅತಿಥಿಯೊಬ್ಬರು ಜೂಮ್‌ನಲ್ಲಿ ಬರಲು ಆಗದೇ ಹೆಣಗಾಡಿದಾಗ ಆಸ್ಟ್ರೇಲಿಯಾದ ಟಿವಿ ನಿರೂಪಕಿ ಅದನ್ನು ನೋಡಿ ಗಹಗಹಿಸಿ ನಕ್ಕ ವಿಡಿಯೋ ವೈರಲ್ ಆಗಿದೆ.
ರಾಯಲ್ ಆಟೋಮೊಬೈಲ್ ಅಸೋಸಿಯೇಷನ್‌ನ ಮಾರ್ಕ್ ಬೊರ್ಲೇಸ್ ಅವರು ಜೂಮ್ಗೆ ಬರಲು ಕಷ್ಟಪಟ್ಟಾಗ ನಿರೂಪಕಿ ಆಲಿಸ್ ಮೊನ್‌ಫ್ರೈಸ್ ಅವರಿಗೆ ನಗು ತಡೆಯಲಾಗಲಿಲ್ಲ. ಇದರ ವಿಡಿಯೋವನ್ನು ಆಲಿಸ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಕಿರು ವಿಡಿಯೋದಲ್ಲಿ ಟಿವಿಯಲ್ಲಿ ಲೈವ್ ಮಾಡುತ್ತಿರುವಾಗ ಮಾರ್ಕ್ ತಮ್ಮ ತಲೆಯ ಮೇಲೆ ಮುದ್ದಾದ ಪುಟ್ಟ ಪಿಜ್ಜಾ ಟೋಪಿ ಹಾಕಿಕೊಂಡಿರುವುದನ್ನು ತೋರಿಸಿದ್ದಾರೆ. ಇದನ್ನು ನೋಡಿ ಅವರ ನಗುವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.