ಮನೆಯಲ್ಲಿ ಇಲಿ ಕಾಟ ಸಾಮಾನ್ಯ. ಗ್ರೌಂಡ್ ಫ್ಲೋರ್ ನಲ್ಲಿರುವವರು ಇಲಿ ಕಾಟಕ್ಕೆ ಬೇಸತ್ತಿರುತ್ತಾರೆ. ಇಲಿಯನ್ನು ಮನೆಯಿಂದ ಓಡಿಸಲು ನಾನಾ ಕರಸತ್ತು ಮಾಡ್ತಾರೆ. ಆದ್ರೆ ಹಿಂದೂ ಧರ್ಮದಲ್ಲಿ ಇಲಿಗೆ ಮಹತ್ವದ ಸ್ಥಾನವಿದೆ. ಅದನ್ನು ಗಣಪತಿ ವಾಹನ ಎಂದು ನಂಬಲಾಗಿದೆ.
ಶಕುನ ಶಾಸ್ತ್ರದ ಪ್ರಕಾರಮ ಮನೆಗೆ ಇಲಿ ಬರೋದು, ಬಿಲ ಮಾಡೋದು ಶುಭ ಹಾಗೂ ಅಶುಭ ಎರಡೂ ಫಲಗಳನ್ನು ನೀಡುತ್ತದೆ. ಮನೆಯಲ್ಲಿ ಸಾಂದರ್ಭಿಕವಾಗಿ ಇಲಿ ಕಾಣಿಸಿಕೊಂಡರೆ ಅದು ಒಳ್ಳೆಯ ಸಂಕೇತವಾಗಿದೆ. ಇದರರ್ಥ ನೀವು ಶೀಘ್ರದಲ್ಲೇ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಲಿದ್ದೀರಿ.
ಇಲಿಗಳು ಮನೆಯ ವಿವಿಧ ಸ್ಥಳಗಳಲ್ಲಿ ರಂಧ್ರಗಳನ್ನು ಮಾಡಲು ಪ್ರಾರಂಭಿಸಿದರೆ, ಅದು ಶುಭವಲ್ಲ. ಮನೆಯಲ್ಲಿ ಎಲ್ಲೆಂದರಲ್ಲಿ ಇಲಿಗಳ ರಂಧ್ರಗಳು ಕಾಣಿಸಿಕೊಂಡ್ರೆ ಶತ್ರುಗಳ ಶಕ್ತಿ ಹೆಚ್ಚಾಗುತ್ತದೆ ಎಂದರ್ಥ. ನೀವು ಜಾಗರೂಕರಾಗಿರುವುದು ಒಳ್ಳೆಯದು.
ಮನೆಯಲ್ಲಿ ದಿನದಿಂದ ದಿನಕ್ಕೆ ಇಲಿಗಳ ಸಂಖ್ಯೆ ಹೆಚ್ಚಾಗ್ತಿದ್ದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಶಕುನ ಶಾಸ್ತ್ರದ ಪ್ರಕಾರ ಮನೆಯಲ್ಲಿ ಇಲಿಗಳ ಸಂಖ್ಯೆ ಹೆಚ್ಚಾದರೆ ಸುಖ, ಶಾಂತಿ, ಸಮೃದ್ಧಿ ದೂರವಾಗುತ್ತದೆ. ಬಡತನ ಮನೆ ಮಾಡುತ್ತದೆ.
ಮನೆಯಲ್ಲಿರುವ ಇಲಿ ರಾತ್ರಿ ಶಬ್ಧ ಮಾಡುವುದು ಹಾಗೂ ಅಳುವುದು ಕೂಡ ಒಳ್ಳೆಯದಲ್ಲ. ಮನೆಯಲ್ಲಿ ದೊಡ್ಡ ಅನಾಹುತ ನಡೆಯಲಿದೆ ಎಂಬುದನ್ನು ಇದು ಸೂಚಿಸುತ್ತದೆ.
ಇಲಿಯನ್ನು ಗಣೇಶನ ಸವಾರಿ ಎಂದು ಪರಿಗಣಿಸಿರುವ ಕಾರಣ ಅದನ್ನು ಕೊಲ್ಲುವುದು ಸೂಕ್ತವಲ್ಲ. ಮನೆಯ ಮೂಲೆ ಮೂಲೆಯಲ್ಲಿ ಹರಳೆಣ್ಣೆ ಇಟ್ಟರೆ ಇಲಿ ಮಾಯವಾಗುತ್ತದೆ.