ಬೆಂಗಳೂರು : ಮಾರ್ಚ್/ಏಪ್ರಿಲ್ 2023ರ ಎಸ್ಎಸ್ಎಲ್ಸಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಗಳ ತಿದ್ದುಪಡಿಗೆ ಪ್ರಸ್ತಾವನೆ ಸಲ್ಲಿಸಲು ಸೆ.29 ಕೊನೆಯ ದಿನವಾಗಿದೆ.
ಈ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಮಾರ್ಚ್/ಏಪ್ರಿಲ್ 2023ರ ಎಸ್ಎಸ್ಎಲ್ಸಿ, ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳ ಅಂಕಪಟ್ಟಿಗಳನ್ನು ಈಗಾಗಲೇ ಉಲ್ಲೇಖಿತ ಸುತ್ತೋಲೆಯಲ್ಲಿ ಸಂಬಂಧಿಸಿದ ಶಾಲೆಗಳಿಗೆ ರವಾನಿಸಲಾಗಿರುತ್ತದೆ.
ಸದರಿ ಅಂಕಪಟ್ಟಿಗಳಲ್ಲಿ ತಿದ್ದುಪಡಿ ಕೋರಿ ಪ್ರಸ್ತಾವನೆಗಳು ಈ ದಿನಾಂಕದವರೆಗೂ ಮಂಡಳಿಗೆ ಸ್ವೀಕೃತವಾಗುತ್ತಿದೆ. ಈ ಸಂಬಂಧ ಸದರಿ ಅಂಕಪಟ್ಟಿಗಳಲ್ಲಿ ತಿದ್ದುಪಡಿಗಳಿದ್ದಲ್ಲಿ ಅರ್ಹ ಪ್ರಸ್ತಾವನೆಯನ್ನು ಮಂಡಲಿಗೆ ಸಲ್ಲಿಸಲು ದಿನಾಂಕ:29.09.2023ರವರೆಗೆ ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿದೆ. ತಿದ್ದುಪಡಿಗಳಿದ್ದಲ್ಲಿ ದಿನಾಂಕ:29.09.2023ರೊಳಗೆ ಸ್ವೀಕೃತವಾಗುವಂತೆ ಪ್ರಸ್ತಾವನೆಯನ್ನು ಮಂಡಳಿಗೆ ಸಲ್ಲಿಸಲು ತಿಳಿಸಿದ್ದಾರೆ.