ಬೆಂಗಳೂರು : ಶಾಲಾ ಮಕ್ಕಳಿಗಾಗಿ ಆಯೋಜಿಸಿದ್ದ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯ ದಿನಾಂಕವನ್ನು ಸಮಗ್ರ ಶಿಕ್ಷಣ ಇಲಾಖೆ ವಿಸ್ತರಣೆ ಮಾಡಿ ಸುತ್ತೋಲೆ ಹೊರಡಿಸಿದೆ.
ತಾಲ್ಲೂಕು ಮಟ್ಟದ ಸ್ಪರ್ಧೆಯನ್ನು ಆಯಾ ಶಾಲಾ ಹಂತದಲ್ಲಿ ಆನ್ಲೈನ್ ಮೂಲಕ ದಿನಾಂಕ: 20.06.2023 ರಿಂದ ದಿನಾಂಕ: 23.06.2023ರವರೆಗೆ ಮುಖ್ಯ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಹಮ್ಮಿಕೊಳ್ಳಲು ಉಲ್ಲೇಖಿತ ಸುತ್ತೋಲೆ ಪತ್ರದಲ್ಲಿ ತಿಳಿಸಲಾಗಿತ್ತು, ರಸಪ್ರಶ್ನೆ ಸ್ಪರ್ಧೆಯಲ್ಲಿ 4420 ಶಾಲೆಗಳು ನೊಂದಣೆಯಾಗಿದ್ದು, ಇವುಗಳ ಪೈಕಿ ಈವರೆಗೆ 3361 ಶಾಲೆಗಳು ಮಾತ್ರ ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತವೆ. ಉಳಿದ ಶಾಲೆಗಳು ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗಿರುತ್ತದೆ. ಜಿಲ್ಲೆಗಳಿಂದ ಶಾಲಾ ಶಿಕ್ಷಕರು ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ತಮ್ಮ ಶಾಲೆಯ ಮಕ್ಕಳು ಭಾಗವಹಿಸಲು ದಿನಾಂಕವನ್ನು ವಿಸ್ತರಿಸುವಂತೆ ಕೋರಿರುತ್ತಾರೆ. ಈ ಹಿನ್ನೆಲೆಯಲ್ಲಿ ದಿನಾಂಕ: 24.06.2023 ರವರೆಗೆ ತಾಲೂಕು ಮಟ್ಟದ ಸ್ಪರ್ಧೆಯನ್ನು ವಿಸ್ತರಿಸಲಾಗಿದೆ.
ತಾಲ್ಲೂಕು ಮಟ್ಟದ ಸ್ಪರ್ಧೆಯ ಫಲಿತಾಂಶವನ್ನು ದಿನಾಂಕ:26.06.2023ರಂದು ಬೆಳಗ್ಗೆ 11:30 ಗಂಟೆಗೆ ವಿದ್ಯಾ ವಾಹಿನಿ ವೆಬ್ ಸೈಟ್ ನಲ್ಲಿ ಪುಕಟಿಸಲಾಗುವುದು ಎಂದು ಸಮಗ್ರ ಶಿಕ್ಷಣ ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.