alex Certify ಬೆಂಗಳೂರಿಗರೇ ಗಮನಿಸಿ : ಕೆರೆಮಿತ್ರ, ಉದ್ಯಾನ ಮಿತ್ರಕ್ಕೆ ‘BBMP’ ಯಿಂದ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿಗರೇ ಗಮನಿಸಿ : ಕೆರೆಮಿತ್ರ, ಉದ್ಯಾನ ಮಿತ್ರಕ್ಕೆ ‘BBMP’ ಯಿಂದ ಅರ್ಜಿ ಆಹ್ವಾನ

ಬೆಂಗಳೂರು: ನಗರದ ಕೆರೆ ಮತ್ತು ಉದ್ಯಾನವನಗಳ ನಿರ್ವಹಣೆಯ ಮೇಲ್ವಿಚಾರಣೆಗೆ ಸಾರ್ವಜನಿಕರ ನೇತೃತ್ವದಲ್ಲಿ ಕೆರೆ ಮಿತ್ರ ಹಾಗೂ ಉದ್ಯಾನ ಮಿತ್ರರ ಪಡೆ ಸ್ಥಾಪನೆಗೆ ಬಿಬಿಎಂಪಿ ಹೊಸದಾಗಿ ಅರ್ಜಿ ಆಹ್ವಾನಿಸಿದೆ.

ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಹಾನಗರಗಳಲ್ಲಿ ಒಂದಾದ ಬೆಂಗಳೂರನ್ನು ಹಸಿರೀಕರಣ ಮಾಡಲು ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಹಾಗೂ ಮರಗಳ ಸಂರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿಗೊಳಿಸುವ ಉದ್ದೇಶದಲ್ಲಿ ಬಿಬಿಎಂಪಿ ವ್ಯಾಪ್ತಿಯ 224 ಶಾಲಾ-ಕಾಲೇಜುಗಳ ಸುಮಾರು 52.015 ವಿದ್ಯಾರ್ಥಿಗಳು ನಡೆಲಾದ ಗಿಡಗಳಿಗೆ ಟ್ಯಾಗ್ ಮಾಡಿಸಿ ಹಸಿರು ರಕ್ಷಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
hasirurakshaka.bbmpgov.in ಸದರಿ ವೆಬ್ಆಪ್ನಲ್ಲಿ ಸಾರ್ವಜನಿಕರು 2023-24ನೇ ಸಾಲಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ನೆಡಲಾದ ಗಿಡಗಳ ವಿವ ರಗಳನ್ನು ವೀಕ್ಷಿಸಬಹುದಾಗಿದೆ ಹಾಗೂ ಸದರಿ ಲಿಂಕ್ನಲ್ಲಿಯೇ ಪಾಲಿಕೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಸಹಾಯ2.0ಗೆ ನೇರವಾಗಿ ಹಸಿರು ರಕ್ಷಕ ಸಂಬಂಧಿಸಿದ ದೂರನ್ನು ಸಹ ನೀಡುವ ಅವಕಾಶವನ್ನು ಕಲ್ಪಿಸಲಾಗಿರುತ್ತದೆ.

ಕೆರೆಮಿತ್ರ ಮೊಬೈಲ್ ಆಪ್ಲೀಕೇಷನ್ನಲ್ಲಿ ದೈನಂದಿನ ಕೆರೆ ನಿರ್ವಹಣೆ ಕಾಮಗಾರಿಯ ತಪಾಸಣೆಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕಲ್ಪಿಸಲಾದ ಮೊಬೈಲ್ ಆಪ್ಲೀಕೇಷನ್ ಆಗಿದ್ದು ಸದರಿ ಆಪ್ಲೀಕೇಷನ್ನಿಂದ ತುರ್ತಾಗಿ ದೈನಂದಿನ ನಿರ್ವಹಣೆಯ ಕುರಿತು ಮೇಲಾಧಿಕಾರಿಗಳು ಕಾಲಕಾಲಕ್ಕೆ ವರದಿಯನ್ನು ಪಡೆಯುವ ಅವಕಾಶ ಕಲ್ಪಿಸಲಾಗಿರುತ್ತದೆ.

ತಪಾಸಣೆಯ ವೇಳೆಯಲ್ಲಿ ಆಪ್ಲಿಕೇಷನ್ನಲ್ಲಿ ಕಲ್ಪಿಸಲಾದ ವಿವಿಧ ನಿರ್ವಹಣೆಯ ಅಂಶಗಳಾದ ಒಳಹರಿವಿನ ಸ್ವಚ್ಚತೆ, ಹೊರಹರಿವಿನ ಸ್ವಚ್ಚತೆ, ಪಥ ಗುಡಿಸುವಿಕೆ, ಕಳೆ ತೆಗೆಯುವುದು, ನೀರಿನಲ್ಲಿರುವ ಕಳೆಯನ್ನು ತೆಗೆಯುವುದು, ಲಾನ್ ಟ್ರೀಮಿಂಗ್, ಮರಗಿಡಗಳಿಗೆ ನೀರುಣಿಸುವಿಕೆ ಇತರೆ ನಿರ್ವಹಣೆಯ ಕಾಮಗಾರಿಗಳ ಬಗ್ಗೆ ದಿನನಿತ್ಯ ಪರಿಶೀಲಿಸಿ ಛಾಯಾಚಿತ್ರಗಳೊಂದಿಗೆ ಆಪ್ಲೋಡ್ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಆಸಕ್ತರು ಬಿಬಿಎಂಪಿ ವೆಬ್ ಸೈಟ್ ನಲ್ಲಿ ಕೆರೆ ಮಿತ್ರ ಅಥವಾ ಉದ್ಯಾನ ಮಿತ್ರ ಆಗಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ತಾವು ವಾಸ ವಿರುವ ವಾರ್ಡಿನಲ್ಲಿರುವ ಕೆರೆ ಮತ್ತು ಉದ್ಯಾನವನದಲ್ಲಿನ ಕಾಮಗಾರಿ ನಿರ್ವಹಣೆ ಬಗ್ಗೆ ಮೇಲ್ವಿಚಾರಣೆ ನಡೆಸು ವುದು, ಪ್ರತಿ ದಿನ ಪರಿಶೀಲಿಸುವುದು, ದಾಖಲೆಗಳನ್ನು ವೆಬ್ಸೈಟ್ನಲ್ಲಿ ದಾಖಲಿಸುವುದು, ಕೆರೆ ಮತ್ತು ಉದ್ಯಾನ ವನದ ಆಗು ಹೋಗುಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಲು ಅನುಕೂಲ ಮಾಡಿಕೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9480683059, 9535015189 ಸಂಪರ್ಕಿಸಬಹುದಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ಹೊರಡಿಸಿದೆ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...