
ಬೆಳಗಾವಿ: ಬುದ್ಧಿಮಾಂದ್ಯ ಯುವತಿ ಮೇಲೆ ಅನ್ಯಕೋಮಿನ ಯುವಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬೆಳಗಾವಿ ತಾಲೂಕಿನ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.
ಇದರಿಂದಾಗಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿದೆ. ಕಾಕತಿಯ ಸಮೀರ್ ಅಬ್ಬಾಸ್ ಧಾಮಣೇಕರ(30) ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಯಾಗಿದ್ದಾನೆ. ಯುವತಿ ಮನೆಯವರು ಜಮೀನಿಗೆ ತೆರಳಿದಾಗ ಮನೆಗೆ ನುಗ್ಗಿದ ಆರೋಪಿ ಯುವತಿಯ ಬಟ್ಟೆ ಬಿಚ್ಚಿ ತಾನು ಬೆತ್ತಲಾಗಿದ್ದಾನೆ. ಈ ವೇಳೆ ಯುವತಿ ಕುಟುಂಬ ಸದಸ್ಯರೊಬ್ಬರು ಮನೆಗೆ ಆಗಮಿಸಿದಾಗ ಸಿಕ್ಕಿಬಿದ್ದಿದ್ದಾನೆ. ಯುವತಿ ಮನೆಯವರು ಸಮೀರ್ ಕುಟುಂಬದವರಿಗೆ ಮಾಹಿತಿ ನೀಡಿದ್ದು, ಗ್ರಾಮಸ್ಥರಿಗೆ ವಿಷಯ ಗೊತ್ತಾಗುತ್ತಿದ್ದಂತೆ ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.