ನವದೆಹಲಿ: ದೆಹಲಿ ಮದ್ಯ ನೀತಿಯಲ್ಲಿ ಜೈಲು ಪಾಲಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಮತ್ತು ಇತರ ಆರೋಪಿಗಳ 52 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿದೆ.
ವಶಪಡಿಸಿಕೊಂಡ ಸ್ವತ್ತುಗಳಲ್ಲಿ ಅಮನದೀಪ್ ಸಿಂಗ್ ಧಾಲ್, ರಾಜೇಶ್ ಜೋಶಿ, ಗೌತಮ್ ಮಲ್ಹೋತ್ರಾ ಮತ್ತು ಕೆಲವರ ಆಸ್ತಿ ಸೇರಿದೆ. ಸಿಸೋಡಿಯಾ ಮತ್ತು ಅವರ ಪತ್ನಿ ಸೀಮಾ ಅವರ ಎರಡು ಆಸ್ತಿಗಳು ಮತ್ತು ಅವರ ಬ್ಯಾಂಕ್ ಖಾತೆಗಳಲ್ಲಿ 11 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಿಸೋಡಿಯಾ ಅವರ ನಿಕಟವರ್ತಿ ದಿಲ್ಲಿಯ ಉದ್ಯಮಿ ದಿನೇಶ್ ಅರೋರಾ ಅವರನ್ನು ಬಂಧಿಸಿದ ಒಂದು ದಿನದ ನಂತರ ಜಾರಿ ನಿರ್ದೇಶನಾಲಯ ಈ ಕ್ರಮ ಜರುಗಿಸಿದೆ. ದೆಹಲಿಯ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಇಡಿ ಪ್ರಕರಣವು ಕೇಂದ್ರೀಯ ತನಿಖಾ ದಳ(ಸಿಬಿಐ) ತನಿಖೆ ನಡೆಸುತ್ತಿರುವ ಪ್ರಕರಣಕ್ಕಿಂತ ಪ್ರತ್ಯೇಕವಾಗಿದೆ.