
ಬ್ರಿಟನ್ಸ್ ಗಾಟ್ ಟ್ಯಾಲೆಂಟ್ ರಿಯಾಲಿಟಿ ಶೋನಲ್ಲಿ ಅಸ್ಸಾಂ ಮೂಲದ 8 ವರ್ಷದ ಬಿನಿತಾ ಚಿಟ್ರಿ ಎಂಬ ಬಾಲಕಿ ಅದ್ಭುತ ನೃತ್ಯ ಪ್ರದರ್ಶನ ನೀಡಿ ನೋಡುಗರ ಮನೆಗೆದ್ದಿದ್ದಾಳೆ.
ಒಂದು ಹಂತದಲ್ಲಿ ತೀರ್ಪುಗಾರರು ಮತ್ತು ವೀಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಬಿನಿತಾ ಡ್ಯಾನ್ಸ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ಉದ್ಯಮಿ ಆನಂದ ಮಹಿಂದ್ರಾ ಸೇರಿದಂತೆ ಹಲವು ಗಣ್ಯರು ವಿನಿತ ಅವರ ಡ್ಯಾನ್ಸ್ ವಿಡಿಯೋ ಹಂಚಿಕೊಂಡು ಅದ್ಭುತ ಪ್ರತಿಭೆ ಎಂದು ಶ್ಲಾಘಿಸಿದ್ದಾರೆ.
ತೀರ್ಪುಗಾರರಲ್ಲಿ ಒಬ್ಬರಾದ ಡೇವಿಡ್ ವಿಲಿಯಮ್ಸ್ ಅವರು, ಈ ಶೋಗೆ ಏಕೆ ಬಂದೇ ಎಂದು ಪ್ರಶ್ನಿಸಿದಾಗ, ಬ್ರಿಟನ್ಸ್ ಗಾಟ್ ಟ್ಯಾಲೆಂಟ್ ಶೋನಲ್ಲಿ ಭಾಗವಹಿಸಿ ಪ್ರಶಸ್ತಿ ಗೆಲುವುದು ನನ್ನ ಕನಸಾಗಿದೆ. ಇಲ್ಲಿ ಗೆದ್ದ ದುಡ್ಡಿನಿಂದ ಪಿಂಕ್ ಪ್ರಿನ್ಸೆಸ್ ಹೌಸ್ ಖರೀದಿಸಬೇಕು ಎನ್ನುವುದು ನನ್ನ ಆಸೆಯಾಗಿದೆ ಎಂದು ಬಿನಿತಾ ಹೇಳಿದ್ದು, ಎಲ್ಲರೂ ಆಕೆಗೆ ಶುಭವಾಗಲಿ ಎಂದು ಹಾರೈಸಿದ್ದಾರೆ.
From Assam to UK: Assam’s talent shines at Britain’s Got Talent
Little Binita Chhetry makes the judges of @BGT go all ‘Awww’ as she presents a powerful performance and moves to the next round.
My best wishes to the little one and hope she is able to buy a pink princess house… pic.twitter.com/G6xk5MEy3M
— Himanta Biswa Sarma (@himantabiswa) March 2, 2025
Just 8 years old.
World class.
Steel-willed;
Because that kind of mastery over her body comes only with intense Practice.And with an unwavering focus on her Ambition, even if it’s just a ‘Pink Princess House’
She’s my #MondayMotivation pic.twitter.com/8gCHwYx6m9
— anand mahindra (@anandmahindra) March 3, 2025
View this post on Instagram