ಹೌಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಭರ್ಜರಿ ಪ್ರದರ್ಶನ ಮುಂದುವರೆದಿದ್ದು, ಮಿಶ್ರ ಡಬಲ್ಸ್ ಜೋಡಿ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಇಂದು ತೈವಾನ್ ವಿರುದ್ಧ ನಡೆದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಫೈನಲ್ ಗೆ ತಲುಪಿದೆ.
ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಏಷ್ಯನ್ ಗೇಮ್ಸ್ 2023 ರ ಮಿಶ್ರ ಡಬಲ್ಸ್ ನಲ್ಲಿ ಫೈನಲ್ ಗೆ ಪ್ರವೇಶಿಸಿದ್ದಾರೆ. ಅವರು ತೈವಾನ್ ನ ಯು-ಹ್ಸಿಯು ಹ್ಸು ಮತ್ತು ಹಾವೊ-ಚಿಂಗ್ ಚಾನ್ ಅವರನ್ನು 6-1, 3-6, 10-4 ಸೆಟ್ ಗಳಿಂದ ಸೋಲಿಸಿದರು. ಹ್ಯಾಂಗ್ಝೌ ಒಲಿಂಪಿಕ್ ಸ್ಪೋರ್ಟ್ಸ್ ಸೆಂಟರ್ ಟೆನಿಸ್ ಸೆಂಟರ್ ಕೋರ್ಟ್ 1ರಲ್ಲಿ ನಡೆದ ಪಂದ್ಯದಲ್ಲಿ ಭಾರತದ ಜೋಡಿ ಒಂದು ಗಂಟೆ 12 ನಿಮಿಷಗಳಲ್ಲಿ ಜಯ ಸಾಧಿಸಿತು.
ಬೋಪಣ್ಣ ಮತ್ತು ರುತುಜಾ ಅವರು ತೈವಾನ್ ನ ತ್ಸುಂಗ್-ಹಾವೊ ಹುವಾಂಗ್ ಮತ್ತು ಎನ್-ಶುವೊ ಲಿಯಾಂಗ್ ಅವರನ್ನು 7-5, 6-3 ಸೆಟ್ ಗಳಿಂದ ಫಿಲಿಪೈನ್ಸ್ ನ ಫ್ರಾನ್ಸಿಸ್ ಕೇಸಿ ಅಲ್ಕಾಂಟರಾ ಮತ್ತು ಅಲೆಕ್ಸಾಂಡ್ರಾ ಈಲಾ ಅವರನ್ನು ಸೋಲಿಸಿದರು.