ಬೆಂಗಳೂರು : ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಯಲಾಗಿದೆ.ಪ್ರಕರಣದ ಪ್ರಮುಖ ಆರೋಪಿ ಎಲ್ಇಟಿ ಉಗ್ರ ನಜೀರ್ ಗೆ ಹಣದ ನೆರವು ನೀಡುತ್ತಿದ್ದವನ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿನ ಎಸ್ಎಲ್ವಿ ಜನರಲ್ ಸ್ಟೋರ್ ಮಾಲೀಕ ನಜೀರ್ಗೆ ಹಣ ತಲುಪಿಸುತ್ತಿದ್ದನು ಎಂಬುದು ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ. ಎಸ್ಎಲ್ವಿ ಜನರಲ್ ಸ್ಟೋರ್ ಮಾಲೀಕನಿಗೆ ಕಳೆದ ಎಂಟು ತಿಂಗಳಿಂದ ಬಂಧಿತ ಐವರು ಶಂಕಿತರು ಹಣ ನೀಡುತ್ತಿದ್ದರು. ಶಂಕಿತ ಉಗ್ರರು ನೀಡಿದ ಲಕ್ಷಾಂತರ ಹಣವನ್ನು ಅಧಿಕಾರಿಗಳ ಮುಖಾಂತರ ಸ್ಟೋರ್ ಮಾಲಿಕ ನಜೀರ್ ಗೆ ತಲುಪಿಸುತ್ತಿದ್ದನು ಎಂಬುದು ಬಯಲಾಗಿದೆ. ಸದ್ಯ. ಸ್ಟೋರ್ ಮಾಲೀಕನನ್ನು ವಶಕ್ಕೆ ಪಡೆದುಕೊಂಡಿರುವ ಸಿಸಿಬಿ ಪೊಲೀಸರು ಎಷ್ಟು ಹಣ ನೀಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕರ್ನಾಟಕದಲ್ಲಿ ಭಾರೀ ವಿಧ್ವಾಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಆರೋಪದ ಮೇಲೆ ಐವರು ಶಂಕಿತರ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸೈಯ್ಯದ್, ಸುಹೇಲ್ ಉಮೇರ್, ಜುನೇದ್, ಮುದಾಸಿನ್, ಜಾಹೀದ್ ಎಂದು ಗುರುತಿಸಲಾಗಿದೆ.2007 ರ ಅಕ್ಟೋಬರ್ ನಲ್ಲಿ ಮೂವರ ಕಿಡ್ನಾಪ್ ಹಾಗೂ ಓರ್ವನ ಮರ್ಡರ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದರು. ಜೈಲಿನಲ್ಲಿರುವಾಗಲೇ ಆರೋಪಿಗಳು ಉಗ್ರರ ಜೊತೆಗೆ ಸಂಪರ್ಕ ಹೊಂದಿದ್ದರು. ಬಳಿಕ ಕರ್ನಾಟಕದಲ್ಲಿ ಭಾರೀ ಕೃತ್ಯಕ್ಕೆ ಸಂಚು ರೂಪಿಸಿದ್ರು ಎನ್ನಲಾಗಿದ್ದು, ಐವರು ಶಂಕಿತರ ಭಯೋತ್ಪಾದಕರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.