ಮಡಿಕೇರಿ : ಬೆಂಗಳೂರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ವತಿಯಿಂದ ಐಟಿಐ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಅಪ್ರೆಂಟಿಷ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಫಿಟ್ಟರ್, ಟರ್ನರ್, ಯಂತ್ರಗಾರರು, ವೆಲ್ಡರ್, ಕೋಪ(ಸಿಒಪಿಎ), ಫೌಂಡ್ರಿಮ್ಯಾನ್, ಶೀಟ್ ಮೆಟಲ್ ವರ್ಕರ್, ಕಾರ್ಪೆಂಟರ್, ಮೆಕಾನಿಕಲ್ ಆರ್ ಮತ್ತು ಸಿ, ಟೂಲ್ ಮತ್ತು ಡೈಮೆಕರ್, ಅಡ್ವಾನ್ಸ್ಡ್ ಸಿ ಎನ್ಸಿ ಮೆಶಿನಿಂಗ್ ಮತ್ತಿತರ ವೃತ್ತಿಗಳ ಅಪ್ರೆಂಟಿಷ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಈ ಟ್ರೇಡ್ಗಳಲ್ಲಿ ಐಟಿಐ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳು ವೆಬ್ಸೈಟ್ನಲ್ಲಿ ಆನ್ಲೈನ್ ಮೂಲಕ ಹೆಸರು ನೋಂದಾಯಿಸಿ ನೋಂದಣಿ ಸಂಖ್ಯೆಯನ್ನು ನಿಗದಿತ ಅರ್ಜಿ ನಮೂನೆಯಲ್ಲಿ ನಮೂದಿಸಿ ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ಡಿಸೆಂಬರ್, 30 ರೊಳಗೆ ತಾಂತ್ರಿಕ ತರಬೇತಿ ಸಂಸ್ಥೆ, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸುರಂಜನದಾಸ್ ರಸ್ತೆ, ವಿಮಾನಪುರ ಅಂಚೆ, ಬೆಂಗಳೂರು-560017 ಈ ವಿಳಾಸಕ್ಕೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಮತ್ತು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ವೆಬ್ಸೈಟ್ www.hal-india.co.in ಎಕ್ಷ್-ಐಟಿಐ ಅಭ್ಯರ್ಥಿಗಳು ಪೋರ್ಟಲ್ www.apprenticeshipindia.org/candidate-registration ನಲ್ಲಿ ನೋಂದಾಯಿಸಿಕೊಳ್ಳಬೇಕು ಮತ್ತು ಅರ್ಜಿಯಲ್ಲಿ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಉಮಾ ಅವರು ತಿಳಿಸಿದ್ದಾರೆ.