ಬಳ್ಳಾರಿ: ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ವತಿಯಿಂದ ಕುಡತಿನಿಯಲ್ಲಿನ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ನಿಗದಿತ ಮಾಸಿಕ ವೇತನದೊಂದಿಗೆ ಒಂದು ವರ್ಷ ಅವಧಿ ಶಿಶಿಕ್ಷು ತರಬೇತಿ ನೀಡಲು ಅರ್ಹ ಗ್ಯಾಜುಯೇಟ್, ಡಿಪ್ಲೋಮಾ ಇಂಜಿನಿಯರಿಂಗ್ ಪೂರ್ಣಗೊಳಿಸಿದ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು Nats 20 https://nats.education.gov.in ಈ ವೆಬ್‌ಸೈಟ್‌ನಲ್ಲಿ KARNATAKA POWER CORPORATION LIMITED[BTPS] ಎಸ್ಟಾಬ್ಲಿಷ್‌ಮೆಂಟ್[SKABLS000001] ಗೆ ಜ.20 ರ ಸಂಜೆ 5 ಗಂಟೆಯೊಳಗಾಗಿ ತಮ್ಮ ವೃತ್ತಿಗನುಗುಣವಾಗಿ ಎಲ್ಲಾ ವಿವರಗಳೊಂದಿಗೆ ಆಯಾ ವೃತ್ತಿಗಳಲ್ಲೇ ಅರ್ಜಿ ಸಲ್ಲಿಸಬೇಕು.
ಶೈಕ್ಷಣಿಕ ವರ್ಷ 2021 ಮತ್ತು ನಂತರದಲ್ಲಿ ಗ್ರಾಜುಯೇಟ್(ಇಂಜಿನಿಯರಿAಗ್), ಡಿಪ್ಲೋಮಾ ಇಂಜಿನಿಯರಿAಗ್ ಉತ್ತೀರ್ಣ ಹೊಂದಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು.
ಶಿಶಿಕ್ಷು ವೃತ್ತಿ ಸಂಖ್ಯೆ ಮತ್ತು ಶಿಷ್ಯವೇತನ:
ಬಿಇ ಸಿವಿಲ್-1, ಬಿಇ ಇ&ಇ-2, ಬಿಇ ಮೆಕ್ಯಾನಿಕಲ್-3, ಬಿಇ ಇನ್‌ಸ್ಟ್ರುಮೆಂಟೇಶನ್-1, ಬಿಇ ಕಂಪ್ಯೂಟರ್ ಸೈನ್ಸ್-1, ಶಿಷ್ಯವೇತನ 12 ಸಾವಿರ ರೂ.
ಡಿಪ್ಲೋಮಾ ಸಿವಿಲ್-1, ಡಿಪ್ಲೋಮಾ ಇ&ಇ-1, ಡಿಪ್ಲೋಮಾ ಮೆಕ್ಯಾನಿಕಲ್-1, ಡಿಪ್ಲೋಮಾ ಕಂಪ್ಯೂಟರ್ ಸೈನ್ಸ್-1, ಡಿಪ್ಲೋಮಾ ಕಮರ್ಷಿಯಲ್ ಪ್ರಾಕ್ಟೀಸ್-1. ಶಿಷ್ಯವೇತನ .10 ಸಾವಿರ.
ಬೇಕಾದ ದಾಖಲೆಗಳು:
ಅಭ್ಯರ್ಥಿಯ ಹೆಸರು, ಆಧಾರ್ ಕಾರ್ಡ್ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆಯ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ದೈಹಿಕಾ ಕ್ಷಮತಾ ಪತ್ರ, ಇತ್ತೀಚಿ ನಾಲ್ಕು ಭಾವಚಿತ್ರ, ಈ ಮೊದಲು ಶಿಶಿಕ್ಷÄ ತರಬೇತಿ ಪಡೆದಿದ್ದಲ್ಲಿ ದಾಖಲೆಯ ವಿವರದ ಪ್ರತಿ ಒದಗಿಸಬೇಕು.
ಇತರೆ ನಿಯಮ:
ಅಭ್ಯರ್ಥಿಗಳು ಕಡ್ಡಾಯವಾಗಿ ಚಾಲ್ತಿಯಲ್ಲಿರುವ ತಮ್ಮ ಸ್ವಂತ ಇ-ಮೇಲ್ ಐಡಿಯನ್ನು ಮಾತ್ರ ಅರ್ಜಿಯಲ್ಲಿ ಭರ್ತಿ ಮಾಡತಕ್ಕದ್ದು, ತರಬೇತಿಯ ಎಲ್ಲಾ ಪತ್ರ ವ್ಯವಹಾರವನ್ನು ನೀಡಿದಂತಹ ಇ-ಮೇಲ್ ಐಡಿ ಮುಖಾಂತರ ಮಾಡಲಾಗುವುದು.
ಅಭ್ಯರ್ಥಿಗಳು ಕಡ್ಡಾಯವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಅದರ ಒಂದು ಪ್ರತಿಯನ್ನು ದಾಖಲೆಗಳೊಂದಿಗೆ ಈ ಕಚೇರಿಗೆ ಲಕೋಟೆಯ ಮೇಲೆ “ಶಿಶಿಕ್ಷು ತರಬೇತಿಗಾಗಿ ಅರ್ಜಿ” ಎಂದು ನಮೂದಿಸಿ ಸಲ್ಲಿಸತಕ್ಕದ್ದು, ಆಫ್‌ಲೈನ್ ಮೂಲಕ ಸಲ್ಲಿಸಿದ ಯಾವುದೇ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಈಗಾಗಲೇ ಶಿಶಿಕ್ಷು ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪುನಃ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಆನ್‌ಲೈನ್ ಅರ್ಜಿಗಳಲ್ಲಿ ಅಭ್ಯರ್ಥಿಗಳ ಮಾಹಿತಿಯು ಅಪೂರ್ಣವಾಗಿದ್ದಲ್ಲಿ ಅಂತಹ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ.
ಶಿಶಿಕ್ಷು ತರಬೇತಿಗಾಗಿ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಶಿಶಿಕ್ಷು ಅಧಿನಿಯಮದಂತೆ ಕನಿಷ್ಟ 18 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಪ.ಜಾತಿ/ಪ. ಪಂಗಡಕ್ಕೆ ಶಿಶಿಕ್ಷು ಕಾಯ್ದೆ ಪ್ರಕಾರ ಮೀಸಲಾತಿ ಇರುತ್ತದೆ. ನಿಗಮದ ಉದ್ಯೋಗಿಗಳ ಮಕ್ಕಳಿಗೆ ಶೇ.25 ರಷ್ಟು ಮೀಸಲಾತಿ ಇರುತ್ತದೆ.
ತರಬೇತಿಯ ಅವಧಿ ಮುಗಿದ ನಂತರ ಶಿಶಿಕ್ಷುಗಳನ್ನು ಕೂಡಲೇ ಬಿಡುಗಡೆಗೊಳಿಸಲಾಗುವುದು ಹಾಗೂ ಯಾವುದೇ ಸಂದರ್ಭದಲ್ಲಿ ಶಿಶಿಕ್ಷುಗಳನ್ನು ನಿಗಮದ ಖಾಯಂ ಸೇವೆಗೆ ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಕುಡತಿನಿಯ ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಕಚೇರಿ ಅಥವಾ ಮೊ.9901340029 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಉಪ ಪ್ರಧಾನ ಸಂಪಾದಕರು ತಿಳಿಸಿದ್ದಾರೆ.