
ಬೆಂಗಳೂರು : ಬಿಎಂಟಿಸಿ ನೌಕರರಿಗೆ ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ಶೀಘ್ರವೇ ಬಿಎಂಟಿಸಿ ನೌಕರರಿಗೆ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗಿದೆ.
ಈ ಕುರಿತು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಬಿಎಂಟಿಸಿ ನೌಕರರಿಗೆ ಕಡಿಮೆ ದರದಲ್ಲಿ ಸಮುದಾಯ ಭವನ ಬಾಡಿಗೆಗೆ ಸಿಗುವಂತಾಗಬೇಕು. ಇನ್ನೊಂದು ವರ್ಷದಲ್ಲಿ ಸಮುದಾಯ ಭವನ ನಿರ್ಮಿಸಿ ಲೋಕಾರ್ಪಣೆಗೊಳ್ಳುವಂತೆ ಆಗಬೇಕು ಎಂದು ತಿಳಿಸಿದ್ದಾರೆ.