![Anant Ambani loses 108 kgs in 18 months! Here is how he overpowered obesity? | India.com](https://static.india.com/wp-content/uploads/2016/04/anant-ambani11.jpg)
ಮುಕೇಶ್ ಅಂಬಾನಿ, ಭಾರತದ ಆಗರ್ಭ ಶ್ರೀಮಂತ ಬಿಸಿನೆಸ್‌ಮ್ಯಾನ್. ವಿಶ್ವದ ಟಾಪ್10 ಶ್ರೀಮಂತರ ಪಟ್ಟಿಯಲ್ಲಿ ಭಾರತದ ಮುಕೇಶ್ ಅಂಬಾನಿ ಕೂಡ ಒಬ್ಬರು. ಇದೇ ಮುಕೇಶ್ ಅಂಬಾನಿಯವರ ಮುದ್ದಿನ ಮಗನೇ ಅನಂತ್ ಅಂಬಾನಿ.
ಮುಕೇಶ್ ಅಂಬಾನಿಯವರಿಗೆ ಮೂವರು ಮಕ್ಕಳು, ಅವರಲ್ಲಿ ಕಿರಿಯ ಮಗ ಅನಂತ್ ಅಂಬಾನಿಗೆ ಸ್ಥೂಲಕಾಯತೆ, ವಿಪರೀತ ತೂಕ ಜೊತೆಗೆ ಅಸ್ತಮಾದಂತಹ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು. ಅದೇ ಸಮಯದಲ್ಲಿ ಅವರು ತೂಕ ಇಳಿಸಿಕೊಳ್ಳುವ ನಿರ್ಧಾರಕ್ಕೆ ಮುಂದಾದರು.
2016ರಲ್ಲಿ ಅನಂತ್ ಅಂಬಾನಿ ಕೇವಲ 18 ತಿಂಗಳಲ್ಲಿ 108 ಕೆಜಿಯಷ್ಟು ತೂಕ ಕಡಿಮೆ ಮಾಡಿ ಎಲ್ಲರ ಗಮನಸೆಳೆದಿದ್ದರು. ಅನಂತ್ ಅಂಬಾನಿ ಅವರ ವೆಟ್ ಲಾಸ್ ಜರ್ನಿಅನೇಕರಿಗೆ ಪ್ರೇರಣೆಯಾಗಿತ್ತು. ಸೆಲೆಬ್ರಿಟಿಯಿಂದ ಹಿಡಿದು ಫಿಟ್ನೆಸ್‌ಸ್ಟ್ರಿಕ್‌ಗಳು ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದರು. ಆದರೆ ಇತ್ತಿಚೆಗೆ ವೈರಲ್ ಆಗಿರುವ ಅನಂತ್ ಅಂಬಾನಿ ಫೋಟೋ ನೋಡುತ್ತಿದ್ದರೆ, ಅವರು ಪುನಃ ಮತ್ತೆ ಹಳೆಯ ಸ್ಥೂಲಕಾಯದ ಅನಂತ್ ಆಗಿರುವ ಹಾಗಿದೆ.
ಇತ್ತಿಚೆಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೊತೆಗಿನ ನಿಶ್ಚಿತಾರ್ಥದ ಫೋಟೋಗಳು ವೈರಲ್ ಆಗಿದ್ದವು. ನವವಧು-ವರ ಜೋಡಿ ನೋಡಿ ಎಲ್ಲರೂ ಖುಷಿಯ ಜೊತೆಗೆ ಶಾಕ್ ಆಗಿದ್ದೇ ಹೆಚ್ಚು. ಕಾರಣ ಅನಂತ್ ಅಂಬಾನಿ ತೂಕ ಹೆಚ್ಚಿಸಿಕೊಂಡಿರುವುದು ಗೊತ್ತಾಗುತ್ತಿತ್ತು. ಅನಂತ್ ಅಂಬಾನಿ ತೂಕ ಏನೋ ಇಳಿಸಿಕೊಂಡಿದ್ದರು. ಆದರೆ ಆ ತೂಕವನ್ನ ಮೆಂಟೆನ್ ಮಾಡಲು ಅವರಿಂದ ಸಾಧ್ಯವಾಗಿರಲಿಲ್ಲ. ಅನಂತ್ ಅಂಬಾನಿ ತೂಕ ಇಳಿಸುವಾಗ ಕಟ್ಟುನಿಟ್ಟಿನ ಆಹಾರ ಪದ್ಧತಿ, ವ್ಯಾಯಾಮ ಅಭ್ಯಾಸ ಮಾಡಿಕೊಂಡಿದ್ದರು. ದಿನಕ್ಕೆ ಏನಿಲ್ಲ ಅಂದರೂ 21 ಕಿಲೋ ಮೀಟರ್ ಕೂಡ ಅವರು ಓಡುತ್ತಿದ್ದುದುಂಟು. ಇನ್ನೂ ಆಹಾರದಲ್ಲೂ 1300 ರಿಂದ 1400 ಕ್ಯಾಲೋರಿಗಳನ್ನಷ್ಟೇ ಅವರು ಸೇವಿಸುತ್ತಿದ್ದರು.
ಅದೆಲ್ಲದರ ಜೊತೆಗೆ ಯೋಗ, ಜಂಕ್ ಪುಟ್‌ಗಳನ್ನೆಲ್ಲ ತ್ಯಜಿಸಿ ಕೇವಲ ಸಸ್ಯಾಹಾರ, ಬೇಳೆ-ಧಾನ್ಯಗಳನ್ನ ಮಾತ್ರ ಅವರು ಸೇವಿಸುತ್ತಿದ್ದರು. ಇವೆಲ್ಲವೂ ಅವರ ತೂಕ ಇಳಿಕೆಗೆ ಸಹಕಾರಿಯಾಗಿರುತ್ತಿದ್ದವು. ಆದರೆ ಈಗ ಮತ್ತೆ ತೂಕ ಏರಿಸಿಕೊಂಡಿರುವುದನ್ನ ನೋಡುತ್ತಿದ್ದರೆ ಆ ಎಲ್ಲ ಅಭ್ಯಾಸಗಳನ್ನ ಅನಂತ್ ಅವರು ಅಂತ್ಯ ಮಾಡಿರುವ ಹಾಗಿದೆ. ಪರಿಣಾಮ ಮತ್ತೆ ಭಾರವಾದ ದೇಹದೊಂದಿಗೆ ಓಡಾಡುವುದಕ್ಕೆ ಕಷ್ಟ ಪಡುವ ಹಾಗಾಗಿದೆ.