ದೇಶದ ಇವಿ ದ್ವಿಚಕ್ರ ಮಾರುಕಟ್ಟೆಯ ಸೇಲ್ಸ್ ಪಟ್ಟಿಯಲ್ಲಿ ಅಗ್ರ ಮೂರರಲ್ಲಿ ಒಂದಾದ ಆಂಪಿಯರ್ ಫೇಂ-2 ಸಬ್ಸಿಡಿ ಯೋಜನೆಯ ಅರ್ಹತೆಯನ್ನು ಕಾಪಾಡಿಕೊಂಡಿದೆ.
ಸಬ್ಸಿಡಿ ಕಾರಣದಿಂದ ಆಂಪಿಯರ್ ದ್ವಿಚಕ್ರ ವಾಹನದ ಬೆಲೆ ಕಡಿಮೆಯಾದರೂ ಸಹ, ಕಂಪನಿಯ ಉತ್ಪನ್ನಗಳ ಬೆಲೆ ಏರಿಕೆ ಮಾಡಲಾಗಿದೆ.
ಆಂಪಿಯರ್ ರೇಂಜ್‌ನಲ್ಲಿ ಕೈಗೆಟುಕುವ ಬೆಲೆಯಲ್ಲಿ ಸಿಗುವ ಜ಼ೀಲ್ ಇಎಕ್ಸ್‌ನ ಬೆಲೆಯನ್ನು 20,900ರೂಗಳಿಗೆ ಏರಿಸಲಾಗಿದೆ. ಮಧ್ಯಮ ಶ್ರೇಣಿಯ ಮ್ಯಾಗ್ನಸ್ ಇಎಕ್ಸ್ ಬೆಲೆಯನ್ನು 21,000ರೂನಷ್ಟು ಏರಿಸಲಾಗಿದ್ದು, ಈ ಸ್ಕೂಟರ್‌ನ ಬೆಲೆ 1,04,900ರೂನಷ್ಟಿದೆ. ಈ ಎರಡೂ ಸ್ಕೂಟರ್‌ಗಳು ಒಮ್ಮೆ ಚಾರ್ಜ್ ಆದರೆ ’80-100’ಕಿಮೀ ನಷ್ಟು ದೂರ ಸಾಗಬಲ್ಲವು.
ಎಲ್‌ಎಫ್‌ಪಿ ಬ್ಯಾಟರಿ ಬಳಸುವ ಪ್ರೈಮಸ್ ಮಾಡೆಲ್‌ನ ಬೆಲೆಯನ್ನು 40,000ರೂಗಳಿಗೆ ಏರಿಕೆ ಮಾಡಿ 1.49 ಲಕ್ಷ ರೂಗೆ ನಿಗದಿ ಪಡಿಸಲಾಗಿದೆ.