ಸ್ನೇಹ ಅತಿ ಮಧುರ, ಸ್ನೇಹ ಅದು ಅಮರ. ಬಡವನಿಗೂ ದಕ್ಕುವ ಶ್ರೀಮಂತಿಕೆ. ಷರತ್ತುಗಳ ಮೇಲೆ ನಿಲ್ಲದ ಬಂಧ. ಕಷ್ಟಕ್ಕೆ ಹೆಗಲು ಕೊಟ್ಟು ಸುಖಗಳಲ್ಲಿ ಸಿಹಿ ತಿನ್ನಿಸುವ ನಂಟು. ಭೂಮಿ ಬಾನು ಸಂಧಿಸುವ ಸ್ಥಳ ಆ ದಿಗಂತ. ನಿಯಮಗಳಲ್ಲಿ ಮೀರಿ ನಂಟು ಬೆಳೆಸೋನು ಸ್ನೇಹಿತ. ಆತ್ಮಕ್ಕೂ ದೇಹಕ್ಕೂ ನಡುವೆ ಸ್ನೇಹ. ಇಹ ಪರದ ನಡುವೆ ಮಿತೃತ್ವ. ಗುಡಿಸಲು ಅರಮನೆ ನಡುವಿನ ಸೇತುವೆ. ಅತಿ ಮಧುರು ಅನುರಾಗ.
ಸ್ನೇಹದ ನಡುವೆ ಬದುಕು ಸರಾಗ. ಕೀಟಳೆ ಮಾಡಿ ಕಾಲೆಳೆಯುವವನೂ ಫ್ರೆಂಡು. ಕಾಟ ಕೊಡೋರೊಂದಿಗೆ ಕುಸ್ತಿಗೆ ನಿಂತವನು ದೋಸ್ತಿ. ಆಗಾಗ್ಗೆ ಪಾರ್ಟಿಗಳ ಕುಡಿತದ ಅಮಲಲ್ಲ. ಕೆಲವೊಮ್ಮೆ ಬಾಳಿಗೆ ಶ್ರೀಗಂಧದ ಘಮಲು. ಮನದ ಕನಸಿನ ಕಾಮನಬಿಲ್ಲಿನ ನೇಕಾರ. ಬದುಕಿನಲ್ಲಿ ಮೆಲ್ಲಗೆ ಇಣುಕಿ ಮಲ್ಲಿಗೆಯಂತಾಗುವ ಹೂಗಾರ. ಬದುಕಿನ ಸ್ವಿಸ್ ಬ್ಯಾಂಕ್ ಒಡೆಯನೂ ಗೆಳೆಯ. ಬೆಂಬಲದ ಬೆಟ್ಟವಾದವನು ಗೆಳೆಯ.
ಸಮುದ್ರದಲ್ಲಿ ಮುಳುಗಿದ್ದು ಟೈಟಾನಿಕ್ ಶಿಪ್. ಲೈಫ್ನಲ್ಲಿ ಸದಾ ತೇಲುವುದು ಈ ಫ್ರೆಂಡ್ ಶಿಪ್. ಆಟವಾಡದೆಯೇ ಗೆಲ್ಲುವ ವರ್ಲ್ಡ್ ಕಪ್. ಮೊಬೈಲ್ನಲ್ಲಿ ಮೆಮೊರಿ ಚಿಪ್ ನ ಹಾಗೆ, ಕಂಪ್ಯೂಟರ್ನಲ್ಲಿ ಮದರ್ ಬೋರ್ಡ್ನ ಹಾಗೆ ವೀಸಾ ಜೊತೆಗಿನ ಪಾರ್ಸ್ಪೋರ್ಟ್ನ ಹಾಗೆ.
ಹಗೆಯಾದರೂ ಹೊಗೆ ಹಾಕುವ ಮುನ್ನ ಬಂದು ನೋಡುವ ಬೆಸ್ಟ್ ಬಡ್ಡೀ. ಕಾಮನ್ ಆಗಿ ಮಗಾ, ಮಚ್ಚಾ , ಮಾಮಾ ಅನ್ನೋ ಪ್ರೀತಿ. ಕೋಪದಲ್ಲಿದ್ದಾಗ ಅಣ್ತಮ್ಮಾ, ಲೋ, ಮಗನೆ ಅನ್ನೋ ಕೂಗು. ಅಫಿಶಿಯಲ್ಸ್ ಆದ್ರೂ ಸ್ಪೆಷಲ್. ಆರ್ಡಿನರಿ ಆದ್ರೂ ಎಕ್ಸ್ಟ್ರಾಡಿನರಿ. ವಿಐಪಿ ಆದ್ರು ಕಂಡಲ್ಲಿ ಬಿಗಿ ಅಪ್ಪುಗೆಯ ನೆಂಟ. ವಿವಿಐಪಿಯಾದ್ರು ಹ್ಯಾಂಡ್ ಶೇಕ್ ಮಾಡೋಕೆ ಸಿದ್ಧ.
ದಿಕ್ಕು ಕಾಣದಂತಾದ ಪರಿಸ್ಥಿತಿಯಲ್ಲಿ ಬೆಳಕು. ತಾನೂ ಬೆಳೆದು ತನ್ನವರನ್ನೂ ಬೆಳಗಿಸುವ ದೀಪ. ಬದುಕಿನ ಭೂಮಿಯಲ್ಲಿ ಮಳೆ ಸುರಿಸುವ ಕ್ಲೌಡ್. ಡ್ಯೂಡ್ ಗಳ ದಿನದ ಶುಭಾಶಯದೊಂದಿಗೆ ಈ ಸ್ಟೋರಿ ಇಲ್ಲಿಗೆ ಕನ್ ಕ್ಲೂಡ್.