ಆಭರಣದ ಮಳಿಗೆಯೊಂದಕ್ಕೆ ನುಗ್ಗಿದ ಖದೀಮರು ಬರೋಬ್ಬರಿ 21 ಕೋಟಿ ರೂಪಾಯಿ ಮೌಲ್ಯದ ಆಭರಣಗಳ ಸಮೇತ ಎಸ್ಕೇಪ್ ಆದ ಘಟನೆಯು ದೆಹಲಿಯ ಜಂಗ್ಪುರದಲ್ಲಿ ಸಂಭವಿಸಿದೆ. ಭಾನುವಾರ ಮಧ್ಯರಾತ್ರಿ ವೇಳೆಗೆ ಈ ಘಟನೆ ಸಂಭವಿಸಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
1948 ರಿಂದಲೂ ಅಸ್ತಿತ್ವದಲ್ಲಿರುವ ಉಮ್ರಾವ್ ಸಿಂಗ್ ಜ್ಯೂವೆಲರ್ಸ್ನಲ್ಲಿ ಈ ಕಳ್ಳತನ ಸಂಭವಿಸಿದೆ. ಕಳ್ಳರು ಪಕ್ಕದ ಕಟ್ಟಡದ ಮೂಲಕ ಆಭರಣ ಅಂಗಡಿಯ ಟೆರೇಸ್ ಗೆ ಜಿಗಿದಿದ್ದಾರೆ. ಇಲ್ಲಿಂದ ಮೂರು ಅಂತಸ್ತಿನ ಜ್ಯೂವೆಲ್ಲರಿ ಮಳಿಗೆಯೊಳಗೆ ನುಗ್ಗಿದ್ದಾರೆ ಎನ್ನಲಾಗಿದೆ. ಕಳ್ಳರು ಸಿಸಿ ಟಿವಿ ಕೇಬಲ್ಗಳನ್ನು ಕತ್ತರಿಸಿ ಬಳಿಕ ಅಂಗಡಿಯೊಳಗೆ ನುಗ್ಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಭರಣ ಮಳಿಗೆಯ ಸ್ಟ್ರಾಂಗ್ ರೂಂ ನೆಲಮಹಡಿಯಲ್ಲಿದ್ದು, ಕಳ್ಳರು ಮೊದಲು ಇಲ್ಲಿಗೆ ಬಂದಿದ್ದಾರೆ. ಇಲ್ಲಿಂದ 10 ರಿಂದ 15 ಲಕ್ಷ ಮೌಲ್ಯದ ನಗದು ಹಾಗೂ 21 ಕೋಟಿ ರೂಪಾಯಿ ಮೌಲ್ಯದ ಚಿನ್ನ ಹಾಗೂ ವಜ್ರದೊಂದಿಗೆ ಎಸ್ಕೇಪ್ ಆಗಿದ್ದಾರೆ.
ಕಾಂಕ್ರೀಟ್ ಸ್ಟ್ರಾಂಗ್ ರೂಮ್ನಲ್ಲಿ ಕಳ್ಳರು ವೃತ್ತಾಕಾರದ ರಂಧ್ರವನ್ನು ಕೊರೆದಿದ್ದಾರೆ. ಇಲ್ಲಿಂದ ಆಭರಣಗಳನ್ನು ಕದ್ದು ಎಸ್ಕೇಪ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Among biggest heists in #Delhi, thieves drill hole in strongroom, steal jewellery worth Rs 21 crorehttps://t.co/oC9HHBKmCr pic.twitter.com/rC8EAQ7RR8
— The Indian Express (@IndianExpress) September 26, 2023