ವಿಚಿತ್ರ ಘಟನೆಯೊಂದರಲ್ಲಿ ಯುನೈಟೆಡ್ ಏರ್ಲೈನ್ಸ್ ಪ್ರಯಾಣಿಕನೊಬ್ಬ ತಂದಿದ್ದ ಲಗೇಜ್ನಲ್ಲಿ ಪ್ಯಾಕ್ ಮಾಡಲಾಗಿದ್ದ ವಿಸ್ಕಿಯ ಬಾಟಲಿ ಓಪನ್ ಆಗಿರುವುದಾಗಿ ದೂರು ದಾಖಲಿಸಿದ್ದಾನೆ. ಮಾತ್ರವಲ್ಲದೇ ಮುಕ್ಕಾಲು ಪಾಲು ವಿಸ್ಕಿ ಕೂಡ ಖಾಲಿಯಾಗಿರುವುದಾಗಿ ಹೇಳಿದ್ದಾನೆ.
ಟ್ವಿಟರ್ನಲ್ಲಿ ಕ್ರಿಸ್ಟೋಫರ್ ಆಂಬ್ಲರ್ ಗ್ಲೆನ್ಮೊರಂಗಿ ಎಂಬಾತ ಈ ವಿಷಯ ತಿಳಿಸಿದ್ದಾರೆ. ಶೇರ್ ಮಾಡಿರುವ ಚಿತ್ರದಲ್ಲಿ, ಸೀಲ್ ತೆರೆದಿರುವುದನ್ನು ನೀವು ಸ್ಪಷ್ಟವಾಗಿ ನೋಡಬಹುದು. ಇದನ್ನು ಪ್ಯಾಕ್ ಮಾಡಿದಾಗ ಹೊಸದಾಗಿ ಮೊಹರು ಮಾಡಲಾಗಿತ್ತು. ಆದರೆ ಈಗ ಸೀಲ್ ತೆರೆಯಲಾಗಿದೆ ಎಂದಿದ್ದಾನೆ. ಇದಕ್ಕೆ 45 ಸಾವಿರ ರೂಪಾಯಿ ಬೆಲೆ ತೆತ್ತಿದ್ದು, ಅದೀಗ ಖಾಲಿಯಾಗಿದೆ ಎಂದಿದ್ದಾರೆ.
ಈ ಟ್ವಿಟರ್ನ್ನು ಯುನೈಟೆಡ್ ಏರ್ಲೈನ್ಸ್ ಟ್ಯಾಗ್ ಮಾಡಲಾಗಿತ್ತು. ಕೂಡಲೇ ಪ್ರತಿಕ್ರಿಯೆ ನೀಡಿರುವ ಏರ್ಲೈನ್ಸ್ ಇದಕ್ಕಾಗಿ ವಿಷಾದಿಸುತ್ತೇವೆ ಎಂದು ಹೇಳಿದೆ.
“ದಯವಿಟ್ಟು ಪ್ರಯಾಣ ಮತ್ತು ಬ್ಯಾಗೇಜ್ ಕ್ಲೈಮ್ ಸಂಖ್ಯೆಗಾಗಿ ನಿಮ್ಮ ದೃಢೀಕರಣ ಸಂಖ್ಯೆಯನ್ನು ಡಿಎಂ ಮಾಡಿ, ನಾವು ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಏರ್ಲೈನ್ಸ್ ಹೇಳಿದೆ.
ಈ ಟ್ವೀಟ್ಗೆ ತಮಾಷೆಯ ಪ್ರತಿಕ್ರಿಯೆಗಳು ಬರುತ್ತಿವೆ. ಏರ್ಲೈನ್ಸ್ನ ಯಾವುದಾದರೂ ಸಿಬ್ಬಂದಿ ಅಲ್ಲಿಯೇ ತೂರಾಡುತ್ತಿದ್ದಿರಬಹುದು. ಹೀಗೆ ಸಿಸಿ ಟಿವಿಯಲ್ಲಿ ನೋಡಿದರೆ ಕದ್ದವನನ್ನು ಪತ್ತೆ ಹಚ್ಚಬಹುದು ಎಂದಿದ್ದಾರೆ ಕೆಲವು ಕಮೆಂಟಿಗರು.