ನವದೆಹಲಿ: ಹಬ್ಬದ ಋತುವಿನಲ್ಲಿ ದೇಶಿಯ ಮಾರ್ಗದಲ್ಲಿ ವಿಮಾನ ಟಿಕೆಟ್ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ದೀಪಾವಳಿ, ಓಣಂ ಹಬ್ಬದ ಋತುವಿನ ಪ್ರಯಾಣಕ್ಕಾಗಿ ವಿಮಾನ ದರಗಳು 25% ವರೆಗೆ ಏರುತ್ತವೆ ಎಂದು ಹೇಳಲಾಗಿದೆ.
ದೀಪಾವಳಿ ಹಬ್ಬದ ವೇಳೆ ಒಂದು ಕಡೆ ಸಂಚಾರದಲ್ಲಿ ಶೇಕಡ 10 ರಿಂದ 15 ರಷ್ಟು ಟಿಕೆಟ್ ದರ ಹೆಚ್ಚಳ ಆಗಬಹುದು. ಓಣಂ ಹಬ್ಬದ ಸಂದರ್ಭದಲ್ಲಿ ಶೇಕಡ 20 ರಿಂದ 25 ರಷ್ಟು ಟಿಕೆಟ್ ದರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಟ್ರಾವೆಲ್ ಪೋರ್ಟಲ್ ಇಕ್ಸಿಗೊ ತಿಳಿಸಿದೆ.
ಅಕ್ಟೋಬರ್ 30 ರಿಂದ ನವೆಂಬರ್ 5 ರವರೆಗೆ ದೆಹಲಿ -ಚೆನ್ನೈ ನಡುವಿನ ತಡೆರಹಿತ ದೇಶೀಯ ಮಾರ್ಗದ ವಿಮಾನ ಟಿಕೆಟ್ ದರ 7618 ರೂಪಾಯಿ ಏರಿಕೆಯಾಗುವ ಸಾಧ್ಯತೆಯಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 10-16ರಷ್ಟು ಹೆಚ್ಚಳವಾಗಲಿದೆ.
ದೆಹಲಿ –ಚೆನ್ನೈ, ಮುಂಬೈ –ಬೆಂಗಳೂರು, ದೆಹಲಿ -ಹೈದರಾಬಾದ್ ನಡುವಿನ ಏಕಮುಖ ಸಂಚಾರ ಟಿಕೆಟ್ ದರ ಸರಾಸರಿ 4,000 ದಿಂದ 5000 ರೂ. ಇದ್ದು, ಇದು ಶೇಕಡ 10 ರಿಂದ 15 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಇಕ್ಸಿಗೊ ಗ್ರೂಪ್ ಸಹ ಕಾರ್ಯನಿರ್ವಾಹಕ ಅಧಿಕಾರಿ ರಜನೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.