ಬೆಂಗಳೂರು: ನೀರಿನ ಉಳಿತಾಯಕ್ಕಾಗಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಸಲು ನೀಡಿದ್ದ ಗಡುವನ್ನು ಜಲ ಮಂಡಳಿ ಏಪ್ರಿಲ್ 30 ರವರೆಗೆ ವಿಸ್ತರಿಸಿದೆ.
ನೀರಿನ ಅಭಾವದ ಹಿನ್ನೆಲೆಯಲ್ಲಿ ವಾಣಿಜ್ಯ ಕಟ್ಟಡಗಳು, ಅಪಾರ್ಟ್ಮೆಂಟ್ ಗಳು, ಮಾಲ್ ಗಳು, ಹೋಟೆಲ್, ರೆಸ್ಟೋರೆಂಟ್ ಗಳು, ಧಾರ್ಮಿಕ ಸ್ಥಳಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿರುವ ನಲ್ಲಿಗಳಿಗೆ ಕಡ್ಡಾಯವಾಗಿ ಮಾರ್ಚ್ 31ರೊಳಗೆ ಏರಿಯೇಟರ್ ಅಳವಡಿಸುವಂತೆ ಜಲಮಂಡಳಿಯ ಆದೇಶ ನೀಡಿತ್ತು.
ಕಾಲಾವಕಾಶ ನೀಡುವಂತೆ ಗ್ರಾಹಕರ ಮನವಿಗೆ ಸ್ಪಂದಿಸಿ ಏಪ್ರಿಲ್ 7ರವರೆಗೆ ಗಡುವು ವಿಸ್ತರಿಸಲಾಗಿತ್ತು. ಆದರೆ, ಹಲವು ಕಡೆಗಳಲ್ಲಿ ಏರಿಯೇಟರ್ ಅಳವಡಿಕೆ ಆಗಿಲ್ಲ. ಅಲ್ಲದೇ, ಗ್ರಾಹಕರು ಮತ್ತೆ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಏಪ್ರಿಲ್ 30ರವರೆಗೆ ನೀರು ಉಳಿತಾಯಕ್ಕಾಗಿ ನಲ್ಲಿಗಳಿಗೆ ಏರಿಯೇಟರ್ ಅಳವಡಿಸಲು ಗಡುವು ವಿಸ್ತರಿಸಲಾಗಿದೆ.