ಭಾರತೀಯ ಆಡಳಿತ ಸೇವೆಯ (IAS) ಅಧಿಕಾರಿ ಸುಪ್ರಿಯಾ ಸಾಹು ಅವರು ತಮಿಳುನಾಡಿನ ಅನಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಆನೆಯ ಸಂಸಾರದ ಕ್ಯೂಟ್ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಆನಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮರಿ ಆನೆ ಮತ್ತು ಅದರ ಕುಟುಂಬವನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋದಲ್ಲಿ ಮರಿಯಾನೆಗಳು ಸಂತೋಷದಿಂದ ಓಡುತ್ತಿರುವುದನ್ನು ಮತ್ತು ತನ್ನ ಹೆತ್ತವರ ಕಾವಲು ಕಣ್ಣುಗಳ ಅಡಿಯಲ್ಲಿ ಇರುವುದನ್ನು ನೋಡಬಹುದಾಗಿದೆ.
“ನಮ್ಮ ಅನಮಲೈ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಈ ಕುಟ್ಟಿ (ಮರಿ) ಆನೆಯು ತನ್ನ ಹೆತ್ತವರ ಕಣ್ಗಾವಲಿನಲ್ಲಿ ತನ್ನ ಹೊಸ ಜಗತ್ತನ್ನು ಅನ್ವೇಷಿಸುತ್ತಿದೆ. ಇದು ಅತ್ಯಂತ ಅದ್ಭುತ” ಎಂದು ಶೀರ್ಷಿಕೆ ನೀಡಲಾಗಿದೆ. ಈ ವೀಡಿಯೊವನ್ನು ಇದಾಗಲೇ 50 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಮರಿ ಆನೆಗೆ ಫಿದಾ ಆಗಿರುವ ಹಲವಾರು ಕಮೆಂಟ್ಗಳು ಬರುತ್ತಿವೆ.