ʼಬ್ರೇಕಪ್ʼ ಬಳಿಕ ಕಂಗನಾರನ್ನು ನಿಂದಿಸಿದ್ದ ನಟನಿಂದ ಈಗ ಅಚ್ಚರಿ ಹೇಳಿಕೆ….!

ನಟಿ ಕಂಗನಾ ರಣಾವತ್ ಜೊತೆ ಡೇಟಿಂಗ್ ಮಾಡಿ ಬಳಿಕ ಬೇರೆ ಬೇರೆಯಾಗಿ, ಅದು ಜೀವನದಲ್ಲಿ ಅಸಹ್ಯಕರ ಭಾಗವಾಗಿತ್ತು ಎಂದಿದ್ದ ನಟ ಅಧ್ಯಾಯನ್ ಸುಮನ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಧ್ಯಾಯನ್ ಸುಮನ್, ಕಂಗನಾ ರಣಾವತ್ ಅವರೊಂದಿಗೆ 2008 ರಿಂದ 2009 ರವರೆಗೆ ಡೇಟಿಂಗ್ ಮಾಡಿದ್ದರು. ಬಳಿಕ ಸಂಬಂಧದಿಂದ ದೂರವಾಗಿ ಕಂಗನಾ ವಿರುದ್ಧ ಮಾನಸಿಕ ಮತ್ತು ದೈಹಿಕ ಕಿರುಕುಳದ ಆರೋಪಗಳನ್ನು ಮಾಡಿದ್ದರು.

ಆದರೆ ಇದೀಗ ಐಎಎನ್‌ಎಸ್‌ನೊಂದಿಗೆ ಮಾತನಾಡಿರುವ ಅಧ್ಯಯಾನ್, ಕಂಗನಾ ರಣಾವತ್ ಅವರ ರಾಜಕೀಯ ಪ್ರವೇಶವನ್ನು ಪ್ರಶಂಸಿಸಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮಂಡಿಯಿಂದ ಲೋಕಸಭೆ ಅಭ್ಯರ್ಥಿಯಾಗಿ ಕಂಗನಾ ಬಿಜೆಪಿಯಿಂದ ಸ್ಪರ್ಧಿಸಿದ್ದು, ಆಕೆ ರಾಜಕೀಯದಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಾರೆ ಎಂದು ಹೊಗಳಿದ್ದಾರೆ.

“ಅವರು ಸಿನಿ ಜೀವನದಲ್ಲಿ ನಟಿಯಾಗಿ ತುಂಬಾ ಚೆನ್ನಾಗಿ ಕಾರ್ಯನಿರ್ವಹಿಸಿದ್ದಾರೆ. ಅದೇ ರೀತಿ ರಾಜಕೀಯ ರಂಗದಲ್ಲೂ ಉತ್ತಮವಾಗಿ ಕೆಲಸ ಮಾಡುತ್ತಾರೆಂದು ನಾನು ನಂಬಿದ್ದೇನೆ. ಆಕೆಗೆ ನಾನು ಶುಭ ಹಾರೈಸುತ್ತೇನೆ” ಎಂದಿದ್ದಾರೆ.

ಅಧ್ಯಾಯನ್ ತಂದೆ, ನಟ ಶೇಖರ್ ಸುಮನ್ ಕೂಡ ಜೂಮ್ ಟಿವಿ ಜೊತೆ ಮಾತನಾಡಿದ್ದು ಕಂಗನಾ ರಣಾವತ್ ಬಗ್ಗೆ ಹೇಳಿದ್ದಾರೆ. ಶೇಖರ್ ಬೆಂಬಲಿಸುವ ಪಕ್ಷದಿಂದಲೇ ಕಂಗನಾ ಕೂಡ ಸ್ಪರ್ಧಿಸಿರುವುದರಿಂದ ಅವರು ಮತ್ತೆ ಒಂದಾಗುತ್ತಾರಾ ಎಂಬ ಪ್ರಶ್ನೆಗೆ, ಇದರ ಬಗ್ಗೆ ನಮ್ಮ ಕುಟುಂಬವಾಗಲೀ ಮಗ ಅಧ್ಯಾಯನ್ ಶೇಖರ್ ಆಗಲಿ ಒತ್ತಡ ಹಾಕುವುದಿಲ್ಲ. ಅದು ಅವರ ವೈಯಕ್ತಿಕ ನಿರ್ಧಾರ. ಪ್ರತಿಯೊಬ್ಬರೂ ವೈಯಕ್ತಿಕವಾಗಿ ತಮ್ಮ ಜೀವನದಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅದು ಸರಿ, ಇದು ತಪ್ಪು ಎಂದು ನಾವು ಹೇಳುವುದಲ್ಲಿ ಅರ್ಥವಿಲ್ಲ ಎಂದಿದ್ದಾರೆ.

ಏತನ್ಮಧ್ಯೆ, ಸಂಜಯ್ ಲೀಲಾ ಬನ್ಸಾಲಿ ಅವರ ಹೀರಾಮಂಡಿಯಲ್ಲಿ ಅಧ್ಯಯನ್ ಮತ್ತು ಶೇಖರ್ ಶೀಘ್ರದಲ್ಲೇ ಕಾಣಿಸಿಕೊಳ್ಳಲಿದ್ದಾರೆ. ಈ ವೆಬ್ ಸರಣಿಯು ಮೇ 1 ರಂದು ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read