ತೆಲುಗು ಹಾಗೂ ತಮಿಳು ಚಿತ್ರರಂಗದ ಬೇಡಿಕೆಯ ನಟಿ ಕೃತಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ದಿನಕ್ಕೊಂದು ಫೋಟೋ ಅಪ್ಲೋಡ್ ಮಾಡುವ ಮೂಲಕ ನೆಟ್ಟಿಗರೊಂದಿಗೆ ಸದಾ ಸಂಪರ್ಕದಲ್ಲಿದ್ದಾರೆ. ಕೃತಿ ಶೆಟ್ಟಿ ಇತ್ತೀಚಿಗಷ್ಟೇ ಫೋಟೋ ಫೋಟೋಶೂಟ್ ಮಾಡಿಸಿದ್ದು, ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ, ಈ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ನೆಟ್ಟಿಗರಿಂದ ಬ್ಯೂಟಿಫುಲ್, ಕ್ಯೂಟ್, ಗಾರ್ಜಿಯಸ್ ಹೀಗೆ ಬಗೆ ಬಗೆಯ ಕಮೆಂಟ್ಸ್ ಗಳು ಬಂದಿವೆ.
ನಟಿ ಕೃತಿ ಶೆಟ್ಟಿ ಅಭಿನಯದ ‘ಮನಮೆ’ ಇತ್ತೀಚಿಗಷ್ಟೇ ತೆರೆಕಂಡಿದ್ದು, ಇದೀಗ ಮಲಯಾಳಂ ನ ‘ಅಜಯಂತೇ ರಂದಂ ಮೋಷನಂ’ ಸೇರಿದಂತೆ ತಮಿಳಿನ ‘ವಾ ವಾಥಿಯಾರ್’ ‘ಲವ್ ಇನ್ಶೂರೆನ್ಸ್ ಕಾರ್ಪೊರೇಷನ್’ ಹಾಗೂ ‘ಜಿನೀ’ ಸಿನಿಮಾ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ.