ಆಶಿಕಾ ರಂಗನಾಥ್ ಹಾಗೂ ಅದಿತಿ ಪ್ರಭುದೇವ ಬಳಿಕ ಇದೀಗ ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿರುವ ಅನುಷಾ ರೈ ಫೋಟೋಶೂಟ್ ಗು ಸಾಕಷ್ಟು ಪ್ರಾಮುಖ್ಯತೆ ನೀಡುತ್ತಾರೆ. ನಟಿ ಅನುಷಾ ರೈ ಇತ್ತೀಚಿಗಷ್ಟೇ ಬೀಚ್ ನಲ್ಲಿ ತೆಗೆಸಿರುವ ತಮ್ಮ ಹಾಟ್ ಫೋಟೋಗಳನ್ನು instagram ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ನೆಟ್ಟಿಗರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದೆ.
ಸಾಯಿ ರಾಮ್ ನಿರ್ದೇಶನದ ‘ಧೈರ್ಯಂ ಸರ್ವರ್ತ ಸಾಧನಂ’ ಸೇರಿದಂತೆ ‘ಅಬ್ಬಬ್ಬಾ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ, ಅನುಷಾ ರೈ ಇತ್ತೀಚಿಗೆ ಚಂದ್ರಕಾಂತ್ ನಿರ್ದೇಶನದ ‘ತೂಫಾನ್’ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿತ್ತಿದ್ದು, ಇದರ ಶೂಟಿಂಗ್ ನಲ್ಲಿ ನಿರತರಾಗಿದ್ದಾರೆ.