
ದಾವಣಗೆರೆ ಬೆಡಗಿ ನಟಿ ಅದಿತಿ ಪ್ರಭುದೇವ ಇಂದು ತಮ್ಮ 30ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 2017ರಲ್ಲಿ ತೆರೆಕಂಡ ಅಜಯರಾವ್ ಅಭಿನಯದ ‘ಧೈರ್ಯಂ’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ ಅದಿತಿ ಪ್ರಭುದೇವ 2019 ರಲ್ಲಿ ಧನ್ವೀರ್ ಗೌಡ ಜೊತೆ ‘ಬಜಾರ್’ ಚಿತ್ರದಲ್ಲಿ ತೆರೆ ಹಂಚಿಕೊಂಡರು. ಇದಾದ ಬಳಿಕ ಅದಿತಿ ಪ್ರಭುದೇವ ಅವರಿಗೆ ಸಾಲು ಸಾಲು ಸಿನಿಮಾಗಳು ಕೈಬೀಸಿ ಕರೆದವು.
ನಟಿ ಅದಿತಿ ಪ್ರಭುದೇವ ನಟನೆಯ ‘ದಿಲ್ ಮಾರ್’ ಹಾಗೂ ‘5 d’ ಶೂಟಿಂಗ್ ಮುಕ್ತಾಯವಾಗಿದ್ದು, ‘ಅಂದೊದಿತ್ತು ಕಾಲ’ ‘ಮಾಫಿಯಾ’ ‘ಮ್ಯಾಟಿನಿ’ ‘ಚೂಮಂತರ್’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಯಶಸ್ ಪಟ್ಲಾ ಅವರೊಂದಿಗೆ ವಿವಾಹವಾಗಿದ್ದ ಇವರು ಇದೆ ಜನವರಿ ಒಂದು ಹೊಸ ವರ್ಷದ ದಿನ ತಾವು ತಾಯಿಯಾಗಿರುವ ಸಂತಸವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇಂದು ಸಿನಿ ತಾರೆಯರಿಂದ ಹಾಗೂ ಅವರ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.