ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟ ರಿಷಬ್ ಶೆಟ್ಟಿ

ಕನ್ನಡ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಇಂದು ತಮ್ಮ 41ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

2012ರಲ್ಲಿ ತೆರೆಕಂಡ ‘ತುಗ್ಲಕ್’ ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಅಭಿನಯಿಸುವ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದ ಇವರು 2013 ರಂದು ‘ಅಟ್ಟಹಾಸ’ ಸೇರಿದಂತೆ ‘ಲೂಸಿಯಾ’ ಸಿನಿಮಾದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕಾಣಿಸಿಕೊಂಡರು.

2016ರಲ್ಲಿ ರಕ್ಷಿತ್ ಶೆಟ್ಟಿ ಅವರ ರಿಕ್ಕಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶನಕ್ಕಿಳಿದರು.  ಬಳಿಕ  ನಿರ್ದೇಶನಕನಾಗಿ ಸಾಕಷ್ಟು ಹೆಸರು ಮಾಡಿದ ರಿಷಬ್ ಶೆಟ್ಟಿ ಅವರು ಜಯತೀರ್ಥ ನಿರ್ದೇಶನದ ‘ಬೆಲ್ ಬಾಟಮ್’ ನಲ್ಲಿ ಮೊದಲ ಬಾರಿ ನಾಯಕನಾಗಿ ಕಾಣಿಸಿಕೊಂಡರು. 2022 ರಂದು ತೆರೆಕಂಡಿದ್ದ ರಿಷಬ್ ಶೆಟ್ಟಿ ಅವರ ‘ಕಾಂತಾರ’ ಚಿತ್ರ ಹೊಸ ದಾಖಲೆ ಬರೆಯುವ ಮೂಲಕ ಭಾರತದೆಲ್ಲೆಡೆ ಭರ್ಜರಿ ಸೌಂಡ್ ಮಾಡಿತ್ತು. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ್ದ ಈ ಸಿನಿಮಾದ ಮತ್ತೊಂದು ಭಾಗ ‘ಪಂಜುರ್ಲಿ’  ಎಂಬ ಶೀರ್ಷಿಕೆಯಿಂದ ತೆರೆ ಮೇಲೆ ಬರಲು  ಸಜ್ಜಾಗಿದ್ದು, ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read