ನಾಳೆ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ಅಭಿಷೇಕ್ ಅಂಬರೀಶ್ ಅಭಿನಯದ ‘ಬ್ಯಾಡ್ ಮ್ಯಾನರ್ಸ್’

ಸೂರಿ ನಿರ್ದೇಶನದ ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಚಿತ್ರ ಕಳೆದ ವರ್ಷ ನವೆಂಬರ್ 23ರಂದು ರಾಜ್ಯದ್ಯಂತ ತೆರೆ ಕಾಣುವ ಮೂಲಕ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಸಿನಿಮಾ ಇದೀಗ ನಾಳೆ ಸಂಜೆ ಆರು ಗಂಟೆಗೆ ಉದಯ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಕುರಿತು ಉದಯ ವಾಹಿನಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದೆ,

ಈ ಚಿತ್ರವನ್ನು ಸ್ಟುಡಿಯೋ 18 ಬ್ಯಾನರ್ ನಲ್ಲಿ ಸುಧೀರ್ ಕೆಎಂ ನಿರ್ಮಾಣ ಮಾಡಿದ್ದು, ಅಭಿಷೇಕ್ ಅಂಬರೀಶ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇನ್ನುಳಿದಂತೆ ತಾರಾ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್, ಮಿತ್ರ, ಮೋಹನ್ ಜುನೇಜಾ, ಅರಸು, ಬ್ಯಾಂಕಾಕ್ ದಿಲೀಪ್, ತಾವರೆಕೆರೆ ರಘು, ರೋಚಿತ್, ತ್ರಿವಿಕ್ರಮ್, ಕಾರ್ತಿ ಸೌಂದರಂ, ಪ್ರಿಯಾಂಕಾ ಕುಮಾರ್, ಸಚ್ಚಿದಾನಂದ್, ಬಿಆರ್ ಶ್ರೀನಿವಾಸ, ಪೂರ್ಣಚಂದ್ರ ಮೈಸೂರು, ಪ್ರಶಾಂತ್, ನಿರಂಜನ್, ಮೈಸೂರು ರಘು, ರಾಜು ಹಿರೇಮಠ್, ವಿಜಯ್ ಬೆಳಗಾಂ, ಪಂಕಜ್ ಬಾಬು, ಸೋಮ ಅರ್ಜುನಗಿ, ವಿಕ್ರಮ್, ಗಣೇಶ್, ಸೋಮ, ಚಂದು ತೆರೆ ಹಂಚಿಕೊಂಡಿದ್ದಾರೆ. ಮಾಸ್ತಿ ಮತ್ತು ಅಮ್ರಿ ಸಂಭಾಷಣೆ, ರವಿವರ್ಮ ಸಾಹಸ ನಿರ್ದೇಶನ, ಬಿ ಧನಂಜಯ್ ನೃತ್ಯ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ, ದನಪಾಲ್ ಮತ್ತು ರಾಜು ಛಾಯಾಗ್ರಹಣವಿದೆ.

https://x.com/UdayaTV/status/1790283918241059111

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read