ಬೆಂಗಳೂರು: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ರಾಜ್ಯದ ವಿವಿಧೆಡೆ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದ್ದ ಖಾಸಗಿ ಬಸ್ ಗಳು ಪ್ರಯಾಣದರ ಹೆಚ್ಚಳ ಮಾಡಿವೆ.
ಎರಡನೇ ಶನಿವಾರ, ಭಾನುವಾರ ಸರ್ಕಾರಿ ರಜೆ ಇದ್ದು, ಮಂಗಳವಾರ ಸ್ವಾತಂತ್ರ್ಯ ದಿನಾಚರಣೆ ಇದೆ. ಹೀಗಾಗಿ ಬಹುತೇಕ ಸರ್ಕಾರಿ, ಖಾಸಗಿ ಸಿಬ್ಬಂದಿ, ಐಟಿ ಬಿಟಿ ಉದ್ಯೋಗಿಗಳು ಸೋಮವಾರ ಒಂದು ದಿನ ಕೆಲಸಕ್ಕೆ ರಜೆ ಹಾಕಿ ನಾಲ್ಕು ದಿನ ರಜೆ ಬಳಸಿಕೊಂಡು ಪ್ರವಾಸ, ಊರುಗಳಿಗೆ ತೆರಳತೊಡಗಿದ್ದಾರೆ. ಪ್ರಯಾಣಿಕರ ಸಂಖ್ಯೆ ಏರಿಕೆಯಾದ ಹಿನ್ನೆಲೆಯಲ್ಲಿ ಸರ್ಕಾರಿ ಬಸ್ ಗಳು ಭರ್ತಿಯಾಗಿವೆ. ಪ್ರಯಾಣಿಕರು ಖಾಸಗಿ ಬಸ್ ಗಳ ಮೊರೆ ಹೋಗಿದ್ದಾರೆ. ಖಾಸಗಿ ಬಸ್ ಗಳಲ್ಲಿ ಪ್ರಯಾಣ ದರ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ಪ್ರಯಾಣಿಕರು ಅನಿವಾರ್ಯವಾಗಿ ಹೆಚ್ಚಿನ ಟಿಕೆಟ್ ದರ ಪಾವತಿಸಿ ಊರಿಗೆ ತೆರವಂತಾಗಿದೆ ಎಂದು ಹೇಳಲಾಗಿದೆ.