ಥೈಲ್ಯಾಂಡ್ ಮೂಲದ ಎಲೆಕ್ಟ್ರಿಕ್ ವಾಹನ ತಯಾರಕ ಸ್ಮಾರ್ಟೆಕ್, ಬ್ಯಾಂಕಾಕ್ ಮೋಟಾರ್ ಶೋನಲ್ಲಿ ಹೊಸ ಎಲೆಕ್ಟ್ರಿಕ್ ಟೂರಿಂಗ್ ಮೋಟಾರ್‌ಸೈಕಲ್ ಅನ್ನು ಅನಾವರಣಗೊಳಿಸಿದೆ. ಫೆಲೋ ಟೂಜ್ ಎಂದು ಕರೆಯಲ್ಪಡುವ ಸೂಪರ್ ಬೈಕ್ ಇದು. ಇದರ ಹೈಲೈಟ್ ಎಂದರೆ ಅದರ 720 ಕಿಮೀ ಬ್ಯಾಟರಿ ಶ್ರೇಣಿ. ಒಮ್ಮೆ ಚಾರ್ಜ್ ಮಾಡಿದ್ರೆ ಈ ಬೈಕ್ 720 ಕಿಮೀ ಓಡಬಲ್ಲದು.
ಬೈಕ್ ನಿರ್ಮಾಣ ಮಾಡಿರುವ ಸ್ಮಾರ್ಟೆಕ್‌ನ ಅಂಗಸಂಸ್ಥೆ ಫೆಲೋ, ಬ್ಯಾಟರಿ ಅಥವಾ ಮೋಟಾರ್ ವಿಶೇಷತೆಗಳನ್ನು ಬಹಿರಂಗಪಡಿಸಿಲ್ಲ. ಈ ಮೋಟಾರ್ ಸೈಕಲ್ ಬ್ಯಾಟರಿ ಬಳಸಿ ಇತರ ಡಿವೈಸ್‌ಗಳನ್ನು ಕೂಡ ಚಾರ್ಜ್ ಮಾಡಬಹುದು. Tooz ಮೋಟಾರ್ ಸೈಕಲ್‌ನ ಬ್ಯಾಟರಿಯನ್ನು Type2 ಚಾರ್ಜರ್ ಬಳಸಿ ಚಾರ್ಜ್ ಮಾಡಬಹುದು. ಕೇವಲ 20 ನಿಮಿಷಗಳಲ್ಲಿ 20-80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು.
ಬೈಕ್ ಅತ್ಯಂತ ಕ್ರಿಯಾತ್ಮಕ ವಿನ್ಯಾಸವನ್ನು ಹೊಂದಿದೆ. ಬೈಕಿನ ಸುತ್ತಲೂ ಫ್ಲಾಟ್ ಬಾಡಿ ಪ್ಯಾನೆಲ್‌ಗಳಿವೆ. ಬೃಹತ್ ಟಾಪ್‌ಬಾಕ್ಸ್ ಮತ್ತು ಪ್ಯಾನಿಯರ್‌ಗಳು ಸಹ ಇವೆ. ಪ್ಯಾನಿಯರ್‌ಗಳಲ್ಲಿ ಒಂದನ್ನು ಫ್ರೀಝಿಂಗ್ ಪೆಟ್ಟಿಗೆಯಾಗಿ ಪರಿವರ್ತಿಸಬಹುದು. ಪ್ರಯಾಣದ ವೇಳೆ ತಂಪು ಪಾನೀಯಗಳನ್ನು ಇಟ್ಟುಕೊಳ್ಳಲು ಇದು ಅನುಕೂಲಕರವಾಗಿದೆ.
ನ್ಯಾವಿಗೇಷನ್, 360-ಡಿಗ್ರಿ ಕ್ಯಾಮೆರಾ, ABS ಮತ್ತು ಎಳೆತ ನಿಯಂತ್ರಣದೊಂದಿಗೆ 12-ಇಂಚಿನ TFT ಪ್ರದರ್ಶನ ಈ ಬೈಕ್‌ನ ವಿಶೇಷತೆ. ಕೆಲವೇ ತಿಂಗಳುಗಳಲ್ಲಿ ಇದು ಥೈಲ್ಯಾಂಡ್‌ನ ಮಾರುಕಟ್ಟೆಗೆ ಬರಲಿದೆ.