ರಾಜ್ಕೋಟ್ : ಆಘಾತಕಾರಿ ಘಟನೆಯೊಂದರಲ್ಲಿ 15 ವರ್ಷದ ಬಾಲಕಿಯೊಬ್ಬಳು ಶಾಲೆಗೆ ಹಾಜರಾಗುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.
ಮೃತ ಬಾಲಕಿಯನ್ನು 9ನೇ ತರಗತಿಯ ಬಾಲಕಿಯ ಜಸ್ದಾನ್ ತಾಲೂಕಿನ ಸಾಕ್ಷಿ ರಾಜೋಸಾರಾ ಎಂದು ಗುರುತಿಸಲಾಗಿದೆ. ಈಕೆ ಪರೀಕ್ಷೆ ಕೊಠಡಿಯೊಳಗೆ ಎಂಟ್ರಿ ಆಗುತ್ತಿದ್ದಂತೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಸಾಕ್ಷಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅಲ್ಲಿ ವೈದ್ಯರು ಅವಳು ಮೃತಪಟ್ಟಿದ್ದಾಳೆ ಎಂದು ಘೋಷಿಸಿದರು.
ಸದ್ಯ, ಸಾಕ್ಷಿ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇಡೀ ದೃಶ್ಯ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ., ಕಳೆದ ಕೆಲವು ತಿಂಗಳುಗಳಿಂದ ಯುವಕರಲ್ಲಿ ಹೃದಯ ಸ್ತಂಭನದ ಘಟನೆಗಳು ಹೆಚ್ಚುತ್ತಿವೆ, ವಿಶೇಷವಾಗಿ ಗುಜರಾತ್ ರಾಜ್ಕೋಟ್ ನಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿದೆ.
ಸಾಂದರ್ಭಿಕ ಚಿತ್ರ