ಪತಿ ಸತ್ತು 23 ವರ್ಷವಾದ್ರೂ ಆತನ ಜೊತೆ ಆಹಾರ ತಿಂತಾಳೆ ಮಹಿಳೆ……!

ಆಪ್ತರು ಸಾವನ್ನಪ್ಪಿದಾಗ ನೋವಾಗೋದು ಸಹಜ. ಅನೇಕರು ತಮ್ಮವರ ದೇಹ ಮಾತ್ರ ಸತ್ತಿದೆ, ಆತ್ಮ ತಮ್ಮ ಜೊತೆಗೇ ಇದೆ ಎಂದು ನಂಬಿ ಜೀವನ ನಡೆಸ್ತಾರೆ. ಸದಾ ಅವರು ಜೊತೆಗಿರುವಂತೆ ಭಾವಿಸ್ತಾರೆ. ಚೀನಾದ ಚಾಂಗ್ಕಿಂಗ್ ನಲ್ಲಿ ಮಹಿಳೆಯೊಬ್ಬಳ ವಿಡಿಯೋ ವೈರಲ್‌ ಆಗಿದೆ. ಆ ಮಹಿಳೆ 23 ವರ್ಷಗಳ ಹಿಂದೆ ಸಾವನ್ನಪ್ಪಿದ ತನ್ನ ಪತಿ ಜೊತೆಗಿದ್ದಾರೆಂದು ಭಾವಿಸಿಕೊಂಡೇ ಜೀವನ ನಡೆಸ್ತಾರೆ.

ಟಿಕ್‌ ಟಾಕ್‌ ನಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ ಡೈನಿಂಗ್‌ ಟೇಬಲ್‌ ಮೇಲೆ ಮಹಿಳೆ ಕುಳಿತಿರುವುದನ್ನು ಕಾಣ್ಬಹುದು. ಎರಡು ಪ್ಲೇಟ್‌ ನಲ್ಲಿ ಆಹಾರವಿದೆ. ಒಂದು ಪ್ಲೇಟ್‌ ಮಹಿಳೆ ತನ್ನ ಮುಂದೆ ಇಟ್ಟುಕೊಂಡಿದ್ದಾಳೆ. ಇನ್ನೊಂದು ಪ್ಲೇಟ್‌ ಒಂದು ಫೋಟೋ ಮುಂದಿದೆ. ಮಹಿಳೆ ತನ್ನ ಮೃತ ಪತಿಯ ಫೋಟೋದ ಮುಂದೆ ಆಹಾರವನ್ನು ಇಟ್ಟಿದ್ದಾಳೆ. ಪತಿ ಪ್ಲೇಟ್‌ ನಲ್ಲಿ ಆಹಾರ ಹೆಚ್ಚಿದ್ದು, ಆಕೆ ಪ್ಲೇಟ್‌ ನಲ್ಲಿ ಕಡಿಮೆ ಇದೆ. ಸ್ವಲ್ಪ ಸಮಯ ಫೋಟೋ ಮುಂದೆ ಆಹಾರವಿಟ್ಟು ನಂತ್ರ ಅದನ್ನು ತೆಗೆಯುತ್ತಾಳೆ ಮಹಿಳೆ.

ಬರೀ ಒಂದು ದಿನವಲ್ಲ ಬರೋಬ್ಬರಿ 23 ವರ್ಷಗಳಿಂದ ಮಹಿಳೆ ಇದೇ ಕೆಲಸ ಮಾಡಿಕೊಂಡು ಬಂದಿದ್ದಾಳೆ. ಈಗ ಈ ಮಹಿಳೆಗೆ 82 ವರ್ಷ ವಯಸ್ಸಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಮಹಿಳೆ ವಿಡಿಯೋವನ್ನು 20 ಲಕ್ಷಕ್ಕಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ನಮ್ಮಜ್ಜಿ ಕೂಡ ಅಜ್ಜ ಸಾವನ್ನಪ್ಪಿದ ನಂತ್ರ ಹೀಗೆ ಮಾಡ್ತಿದ್ದರು. ಸುಮ್ಮನೆ ಆಹಾರ ಹಾಳು ಮಾಡ್ತಾರೆಂದು ನಾನು ಭಾವಿಸಿದ್ದೆ. ಆದ್ರೀಗ ಅದ್ರ ಮಹತ್ವ ಗೊತ್ತಾಗ್ತಿದೆ ಎಂದು ವ್ಯಕ್ತಿಯೊಬ್ಬ ಬರೆದಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read