ನೆಟ್‌ಫ್ಲಿಕ್ಸ್‌ನ ವೆಡ್ನೆಸ್‌ ಡೇ ಪಾತ್ರವನ್ನು ಮರುಸೃಷ್ಟಿಸಿದ ಬಾಲಕಿ: ಹುಬ್ಬೇರಿಸಿದ ನೆಟ್ಟಿಗರು

ನೆಟ್‌ಫ್ಲಿಕ್ಸ್‌ನ ಅಲೌಕಿಕ-ಹಾಸ್ಯಕ್ಕೆ ಜನರು ಫಿದಾ ಆಗಿದ್ದಾರೆ. ಇದೇ ಕಾರಣಕ್ಕೆ ಹೆಚ್ಚಿನ ಪ್ರೇಕ್ಷಕರು ಇದನ್ನು ಇಷ್ಟಪಡುತ್ತಾರೆ. ನೀವು ಇಲ್ಲಿ ಬರುವ ಸರಣಿಯನ್ನು ವೀಕ್ಷಿಸದಿದ್ದರೂ, ಇಲ್ಲಿ ಆಗಾಗ್ಗೆ ಬರುವ ನೃತ್ಯದ ದೃಶ್ಯಗಳನ್ನು ಗಮನಿಸಿರಲಿಕ್ಕೆ ಸಾಕು.

ಹೆಚ್ಚಿನವರಿಗೆ ತಿಳಿದಿರುವಂತೆ ಜೆನ್ನಾ ಒರ್ಟೆಗಾ ನೆಟ್‌ಫ್ಲಿಕ್ಸ್‌ನ ಹೊಸ ಋತುವಿನ ಪ್ರಮುಖ ಪಾತ್ರ. ವೆಡ್ನೆಸ್‌ ಡೇ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುವ ಒರ್ಟೆಗಾಗೆ ಮನಸೋಲದ ನೆಟ್​ಫ್ಲಿಕ್ಸ್​ ಬಳಕೆದಾರರೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಈಕೆಯದ್ದು ಬಹಳ ಚರ್ಚೆಯ ವಿಷಯವಾಗಿದೆ. ಈಗ ಅದೇ ಪಾತ್ರವನ್ನು ಬಾಲಕಿಯೊಬ್ಬಳು ಮಾಡಿದ್ದು, ಅದೀಗ ವೈರಲ್​ ಆಗುತ್ತಿದೆ. ವೆಡ್ನೆಸ್‌ ಡೇ ಪಾತ್ರವನ್ನು ಈ ಬಾಲಕಿ ಮರುಸೃಷ್ಟಿಸಿದ್ದು ಗೋ ಗೋ ಗಕ್​ ಹಾಡಿಗೆ ಹೆಜ್ಜೆ ಹಾಕಿದ್ದಾಳೆ.

ಈಗ ವೈರಲ್ ಆಗಿರುವ ವಿಡಿಯೋದಲ್ಲಿರುವ ಹುಡುಗಿಯನ್ನು 8 ವರ್ಷದ ಗೇಬ್ರಿಯೆಲಾ ಕೈಲಿ ಎಂದು ಗುರುತಿಸಲಾಗಿದೆ. ಈಕೆ ಡಿಸೆಂಬರ್‌ನಲ್ಲಿ ಡ್ಯಾನ್ಸ್ ರೀಲ್ ಅನ್ನು ಅಪ್‌ಲೋಡ್ ಮಾಡಿದ್ದಾಳೆ. ಅಂದಿನಿಂದ ಇಂಟರ್ನೆಟ್ ಇದಕ್ಕಾಗಿ ಎಲ್ಲರ ಹೃದಯ ಗೆದ್ದಿದೆ. ಇನ್‌ಸ್ಟಾಗ್ರಾಮ್ ರೀಲ್ ಇಲ್ಲಿಯವರೆಗೆ ಸುಮಾರು 37 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು ಎರಡು ಮಿಲಿಯನ್‌ಗಿಂತಲೂ ಹೆಚ್ಚು ಲೈಕ್ಸ್​ ಪಡೆದಿವೆ.

https://youtu.be/pGw2zOYoA98

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read