
ಕೆನಡಾದ ಆಲ್ಬರ್ಟಾ ಪ್ರಾಂತ್ಯದ ಕ್ಯಾಲ್ಗರಿಯ ಪಶ್ಚಿಮಕ್ಕೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಕೆನಡಾ ಪೊಲೀಸರು ಶನಿವಾರ ತಿಳಿಸಿದ್ದಾರೆ.
ಪೈಲಟ್ ಮತ್ತು ಐವರು ಪ್ರಯಾಣಿಕರನ್ನು ಹೊತ್ತ ವಿಮಾನವು ಶುಕ್ರವಾರ ರಾತ್ರಿ ನಗರದ ಪಶ್ಚಿಮದಲ್ಲಿರುವ ಸ್ಪ್ರಿಂಗ್ಬ್ಯಾಂಕ್ ವಿಮಾನ ನಿಲ್ದಾಣದಿಂದ ಹೊರಟು ಬ್ರಿಟಿಷ್ ಕೊಲಂಬಿಯಾದ ಸಾಲ್ಮನ್ ಆರ್ಮ್ಗೆ ತೆರಳುತ್ತಿತ್ತು ಎಂದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ತಿಳಿಸಿದೆ.
ವಿಮಾನವು ಸಿಂಗಲ್ ಎಂಜಿನ್ ಪೈಪರ್ ಪಿಎ -32 ಆಗಿದ್ದು, ಅಪಘಾತದ ಬಗ್ಗೆ ಮಂಡಳಿ ತನಿಖೆ ನಡೆಸುತ್ತಿದೆ ಎಂದು ಸಾರಿಗೆ ಸುರಕ್ಷತಾ ಮಂಡಳಿಯ ವಕ್ತಾರರು ತಿಳಿಸಿದ್ದಾರೆ.