ಆಕ್ಸಿಟೋಸಿನ್ ಅನ್ನು ‘ಪ್ರೀತಿಯ ಹಾರ್ಮೋನ್’ ಎಂದೂ ಕರೆಯುತ್ತಾರೆ. ಯಾಕಂದ್ರೆ ದೇಹದಲ್ಲಿ ಆಕ್ಸಿಟೋಸಿನ್ ಉಪಸ್ಥಿತಿಯಿಂದಾಗಿ ಪ್ರೀತಿ, ದೈಹಿಕ ಸಂಬಂಧ, ಅಪ್ಪುಗೆ ಮತ್ತು ಚುಂಬನ ಮಾಡುವ ಬಯಕೆ ನಿಮ್ಮಲ್ಲಿ ಇರುತ್ತದೆ.
ಪ್ರೀತಿಯ ಭಾವನೆ ಸ್ವಲ್ಪ ಹೆಚ್ಚಾಗಬೇಕೆಂದು ನೀವು ಬಯಸಿದರೆ, ಇದಕ್ಕಾಗಿ ಕೆಲವು ವಿಶೇಷ ಆಹಾರಗಳನ್ನು ತಿನ್ನಬೇಕು. ಆಕ್ಸಿಟೋಸಿನ್ ಅನ್ನು ಹೆಚ್ಚಿಸಲು ಕೆಲಸ ಮಾಡುವ ಆಹಾರಗಳು ಯಾವುವು ಎಂಬುದನ್ನು ನೋಡೋಣ.
ಡಾರ್ಕ್ ಚಾಕೊಲೇಟ್: ಚಾಕಲೇಟ್ ಹೆಸರು ಕೇಳಿದರೆ ಎಲ್ಲರ ಬಾಯಲ್ಲಿ ನೀರೂರುತ್ತದೆ. ಡಾರ್ಕ್ ಚಾಕಲೇಟ್ ತಿನ್ನುವುದರಿಂದ ಮೂಡ್ ಸುಧಾರಿಸುತ್ತದೆ. ಮನಸ್ಸಿನಲ್ಲಿ ಪ್ರೀತಿಯ ಭಾವನೆ ಬರಲು ಪ್ರಾರಂಭಿಸುತ್ತದೆ.
ಬ್ರೊಕೊಲಿ: ಹಸಿರು ತರಕಾರಿಗಳಲ್ಲಿ ಬ್ರೊಕೊಲಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ವಿಟಮಿನ್‌ಗಳ ಸಮೃದ್ಧ ಮೂಲವಾಗಿದೆ. ಬ್ರೊಕೊಲಿ ಸೇವನೆಯಿಂದ ದೇಹ ಶಕ್ತಿಯನ್ನು ಪಡೆಯುತ್ತದೆ ಮತ್ತು ಆಕ್ಸಿಟೋಸಿನ್ ಹಾರ್ಮೋನ್ ಸಹ ಹೆಚ್ಚಾಗುತ್ತದೆ.
ಕಾಫಿ: ಸಾಮಾನ್ಯವಾಗಿ ಬಹುತೇಕ ಜನರು ದಿನಕ್ಕೆ ಕನಿಷ್ಟ ಎರಡು ಲೋಟ ಕಾಫಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡಿರ್ತಾರೆ. ಒಟ್ಟಿಗೆ ಕುಳಿತು ಕಾಫಿ ಕುಡಿಯುತ್ತ ಹರಟೋದು ಕಾಮನ್. ಕಾಫಿ ಶಾಪ್‌ಗಳಲ್ಲಿ ಪ್ರಣಯ ಪಕ್ಷಿಗಳು ಕಾಣಿಸಿಕೊಳ್ಳಲು ಇದೇ ಕಾರಣ. ಈ ಪಾನೀಯದಲ್ಲಿರುವ ಕೆಫೀನ್ ಆಕ್ಸಿಟೋಸಿನ್ ನಮ್ಮೊಳಗಿನ ನ್ಯೂರಾನ್‌ಗಳನ್ನು ಪ್ರಚೋದಿಸುತ್ತದೆ. ಇದರಿಂದಾಗಿ ನಮ್ಮ ಭಾವನೆಗಳು ರೀಚಾರ್ಜ್ ಆಗಲು ಪ್ರಾರಂಭಿಸುತ್ತವೆ. ಪ್ರೇಮಿಗಳು, ದಂಪತಿಗಳು ಮನಬಿಚ್ಚಿ ಮಾತನಾಡುತ್ತಾರೆ.
ಚಿಯಾ ಬೀಜಗಳು: ಈ ಬೀಜಗಳನ್ನು ಸೇವಿಸುವುದರಿಂದ ನಿಮ್ಮ ಭಾವನೆಗಳು ಉತ್ಸುಕವಾಗುತ್ತವೆ. ನಿಮ್ಮಲ್ಲಿರುವ ಭಾವನೆಗಳನ್ನು ನಿಮ್ಮ ಸಂಗಾತಿಗೆ ಮುಕ್ತವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಇದನ್ನು ಅನೇಕ ಪದಾರ್ಥಗಳಲ್ಲಿ ಬೆರೆಸಿ ತಿನ್ನಬಹುದು. ನೀರಿನಲ್ಲಿ ನೆನೆಸಿ ಸಹ ಕುಡಿಯಬಹುದು.
ಕಿತ್ತಳೆ ಜ್ಯೂಸ್: ಈ ಹಣ್ಣಿನ ರಸದಲ್ಲಿ ವಿಟಮಿನ್ ಸಿ ಇದೆ. ಅದರ ಉತ್ಕರ್ಷಣ ನಿರೋಧಕ ಗುಣಗಳು ನಮ್ಮ ದೇಹದೊಳಗೆ ಸಕಾರಾತ್ಮಕ ಪರಿಣಾಮ ಬೀರುತ್ತವೆ. ಇದರಿಂದ ಮನಸ್ಸು ತಂಪಾಗುತ್ತದೆ ಮತ್ತು ಪ್ರೀತಿಸುವ ಬಯಕೆ ಹೆಚ್ಚಾಗುತ್ತದೆ.