
ಪ್ರಕರಣ ಸಂಬಂಧ ಧಾರಾವಿ ಪ್ರದೇಶದ ಇಬ್ಬರು ಯುವಕರನ್ನು ಮುಂಬೈ ಬಾಂದ್ರಾ ಪೊಲೀಸರು ಬಂಧಿಸಿದ್ದಾರೆ. ಬಾಂದ್ರಾದಲ್ಲಿ ಭಾನುವಾರ ಬೆಳಗ್ಗೆ ಯುವತಿ ವಾಕಿಂಗ್‌ಗೆ ಹೊರಟಾಗ ಈ ಘಟನೆ ನಡೆದಿದೆ.
ಘಟನೆ ನಡೆದ ಕೂಡಲೇ ಯುವತಿ ದೂರು ದಾಖಲಿಸಿದ್ದು ಸಿಸಿ ಕ್ಯಾಮೆರಾ ದೃಶ್ಯಾವಳಿ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.
ಸಿಸಿ ಕ್ಯಾಮೆರಾದ ದೃಶ್ಯಾವಳಿಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು, ದ್ವಿಚಕ್ರ ವಾಹನ ಸವಾರರು ಯುವತಿ ಹೋಗುತ್ತಿದ್ದ ವಿರುದ್ಧ ದಿಕ್ಕಿನಿಂದ ಬಂದು ಅವಳ ಫೋನ್ ಕದಿಯುವ ಪ್ರಯತ್ನದಲ್ಲಿ ಅವಳ ಎದೆಗೆ ಹೊಡೆಯುವುದನ್ನು ತೋರಿಸುತ್ತದೆ.
ಮೊಬೈಲ್ ಕದಿಯಲು ಸಾಧ್ಯವಾಗದೇ ಅವರಿಬ್ಬರು ಸ್ಥಳದಿಂದ ತೆರಳುವುದನ್ನು ದೃಶ್ಯದಲ್ಲಿ ನೋಡಬಹುದು.