ಬ್ಯುಸಿ ಲೈಫ್ ನಲ್ಲಿ ಒತ್ತಡ ಸಾಮಾನ್ಯ. ಒತ್ತಡದ ಪರಿಣಾಮವನ್ನು ಇಡೀ ದೇಹದಲ್ಲಿ ಕಾಣಬಹುದಾಗಿದೆ. ಅದ್ರಲ್ಲೂ ಕಣ್ಣು ನಮ್ಮ ದಣಿವನ್ನು ಸ್ಪಷ್ಟವಾಗಿ ಹೇಳುತ್ತದೆ. ಒತ್ತಡ ಹಾಗೂ ದಣಿವಾದಲ್ಲಿ ಕಣ್ಣು ಮಂಕಾಗುತ್ತದೆ. ಒತ್ತಡದಿಂದ ಹೊಳಪು ಕಳೆದುಕೊಳ್ಳುವ ಕಣ್ಣುಗಳಿಗೆ ಚೈತನ್ಯ ತುಂಬುವ ಕೆಲಸವನ್ನು ಕೆಲ ಆಹಾರ ಮಾಡುತ್ತದೆ. ಸುಂದರ ಕಣ್ಣಿಗಾಗಿ ಕೆಲವೊಂದು ಆಹಾರವನ್ನು ಅವಶ್ಯವಾಗಿ ಸೇವನೆ ಮಾಡಿ.
ಕಾರ್ನ್ : ಕಣ್ಣಿನ ಸೌಂದರ್ಯಕ್ಕೆ ಧಾನ್ಯಗಳು ಬೆಸ್ಟ್. ಕಾರ್ನ್ ಕಣ್ಣಿನ ಹೊಳಪನ್ನು ಹೆಚ್ಚಿಸುತ್ತದೆ. ಜಿಕ್ಸಾಂಥಿನ್, ಲಿಟೀನ್, ಆಂಟಿ ಆಕ್ಸಿಡೆಂಟ್ ಗಳಂತ ಅಂಶ ಕಾರ್ನ್ ನಲ್ಲಿರುವುದ್ರಿಂದ ಇದು ಕಣ್ಣನ್ನು ಸದಾ ಆರೋಗ್ಯವಾಗಿರಿಸುತ್ತದೆ.
ಟೋಮೋಟೋ : ಡಯೆಟ್ ನಲ್ಲಿ ಆಂಟಿ ಆಕ್ಸಿಡೆಂಟ್ ವಸ್ತುಗಳು ಅವಶ್ಯವಾಗಿರಲಿ. ಟೋಮೋಟೋದಲ್ಲಿ ಲೈಕೋಪೀನ್ ನಂತಹ ಆಂಟಿ ಆಕ್ಸಿಡೆಂಟ್ ಅಂಶವಿರುತ್ತದೆ. ಇದು ಕಣ್ಣಿಗೆ ಬಹಳ ಪ್ರಯೋಜನಕಾರಿ.
ಕ್ಯಾರೆಟ್ : ಕ್ಯಾರೆಟ್ ನಲ್ಲಿ ವಿಟಮಿನ್ ಎ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಪ್ರತಿದಿನ ಕ್ಯಾರೆಟ್ ಸೇವನೆ ಮಾಡುವುದ್ರಿಂದ ಕಣ್ಣಿನ ಅನೇಕ ಸಮಸ್ಯೆಗಳು ದೂರವಾಗುತ್ತವೆ.
ಆಲಿವ್ ಆಯಿಲ್ : ಆಲಿವ್ ಆಯಿಲ್ ಕಣ್ಣಿಗೆ ಬಹಳ ಪ್ರಯೋಜನಕಾರಿ. ಕಣ್ಣಿನ ಅನೇಕ ರೋಗಗಳನ್ನು ತಡೆಗಟ್ಟುವ ಶಕ್ತಿ ಆಲಿವ್ ಆಯ್ಲಿಗಿದೆ.
ಸಿಹಿ ಆಲೂಗಡ್ಡೆ : ಆರೋಗ್ಯಕರ ಕಣ್ಣಿಗೆ ಸಿಹಿ ಆಲೂಗಡ್ಡೆ ಬೆಸ್ಟ್. ಇದ್ರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಫೈಬರ್, ಮ್ಯಾಂಗನೀಸ್, ಪೋಟ್ಯಾಸಿಯಂ ಇರುತ್ತದೆ.