ಹೂಕೋಸು ತುಂಬಾ ರುಚಿಕರವಾದ ತರಕಾರಿಯಾಗಿದೆ. ಆದರೆ ಇದು ಬಹಳ ಬೇಗ ಹಾಳಾಗುವುದರಿಂದ ಇದನ್ನು ಸ್ಟೋರ್ ಮಾಡಿ ಇಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ಹೂಕೋಸನ್ನು ಹಲವು ದಿನಗಳ ಕಾಲ ಸಂಗ್ರಹಿಸಿಡಲು ಈ ಟಿಪ್ಸ್ ಫಾಲೋ ಮಾಡಿ.
ಮೊದಲು ತಾಜಾವಾದ ಹೂಕೋಸನ್ನು ತೆಗೆದುಕೊಂಡು ಅದರ ಹೂಗಳನ್ನು ತುಂಬಾ ಚಿಕ್ಕದಾಗಿ ಬಿಡಿಸಿಕೊಳ್ಳಿ. ಬಳಿಕ ನೀರಿಗೆ ½ ಚಮಚ ಉಪ್ಪು ಬೆರೆಸಿ ಹೂಕೋಸನ್ನು ಮುಳುಗಿಸಿ 15 ನಿಮಿಷಗಳ ಕಾಲ ಇಡಿ. ಇದರಿಂದ ಅದರಲ್ಲಿರುವ ಕೀಟಗಳು ಹೊರಗೆ ಬರುತ್ತವೆ.
ಬಳಿಕ ಅದನ್ನು ಸಾಮಾನ್ಯವಾದ ನೀರಿನಲ್ಲಿ ವಾಶ್ ಮಾಡಿ. ಬಳಿಕ 2 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಕುದಿಸಿ. ಆಮೇಲೆ ಅದನ್ನು ಐಸ್ ವಾಟರ್ ಗೆ ಹಾಕಿ 5 ನಿಮಿಷ ತಣ್ಣಗಾಗಲು ಬಿಡಿ. ಬಳಿಕ ಅದನ್ನು ತೆಗೆದು ಬಟ್ಟೆಯಿಂದ ಚೆನ್ನಾಗಿ ಒರೆಸಿ ಫ್ರಿಜ್ ನಲ್ಲಿಡಿ. ಇದರಿಂದ ಹೂಕೋಸು ದೀರ್ಘಕಾಲ ಹಾಳಾಗುವುದಿಲ್ಲ.