ಪ್ರತಿಯೊಬ್ಬ ಮನುಷ್ಯನೂ ನಿದ್ರೆಯಲ್ಲಿ ಕನಸು ಕಾಣುತ್ತಾನೆ. ಕನಸು ಇದೇ ರೀತಿಯಲ್ಲಿ ಇರಬೇಕು ಅನ್ನೋದನ್ನ ನೀವು ನಿರ್ಧಾರ ಮಾಡೋಕೆ ಸಾಧ್ಯವಿಲ್ಲ. ಸಾಮಾನ್ಯವಾಗಿ ನೀವು ಇಡೀ ದಿನ ಹೆಚ್ಚೆಚ್ಚು ಯೋಚನೆ ಮಾಡಿದ ಇಲ್ಲವೇ ಮಾತನಾಡಿದ ವಿಚಾರಗಳು ರಾತ್ರಿ ನಿದ್ರೆ ವೇಳೆ ಕನಸಿನ ರೂಪದಲ್ಲಿ ಬಂದು ಬಿಡುತ್ತೆ. ಕೆಲವೊಮ್ಮೆ ಏನೇನೋ ವಿಚಿತ್ರ ವಸ್ತು ಕಾಣುತ್ತವೆ. ಹಾಗಾದ್ರೆ ಯಾವ ವಸ್ತುಗಳು ಕನಸಿನಲ್ಲಿ ಕಾಣಿಸಿದ್ರೆ ಒಳ್ಳೆಯದು ಅನ್ನೋದಕ್ಕೆ ಇಲ್ಲಿದೆ ಮಾಹಿತಿ.
ಗಿಳಿ : ಕನಸಿನಲ್ಲಿ ಗಿಳಿ ಕಾಣಿಸಿಕೊಂಡಲ್ಲಿ ತುಂಬಾನೇ ಒಳ್ಳೆಯದು ಎಂಬ ನಂಬಿಕೆ ಇದೆ. ಕನಸಿನಲ್ಲಿ ಗಿಳಿ ಬರ್ತಿದೆ ಎಂದರೆ ಶೀಘ್ರದಲ್ಲೇ ನೀವು ಧನಲಾಭ ಪಡೆಯಲಿದ್ದೀರಿ ಎಂಬರ್ಥವಿದೆ.
ನೀವೇ ಆತ್ಮಹತ್ಯೆ ಮಾಡಿಕೊಂಡಂತೆ ಎನಿಸುವುದು: ಕನಸಿನಲ್ಲಿ ನೀವು ಆತ್ಮಹತ್ಯೆಗೆ ಶರಣಾಗೋದು ಅಂದರೆ ಅದೊಂದು ಭಯಾನಕ ದೃಶ್ಯವೇ ಸರಿ. ಆದರೆ ಇದೂ ಕೂಡ ಶುಭ ಸಂಕೇತವಾಗಿದೆ. ಈ ರೀತಿಯ ಕನಸು ನಿಮಗೂ ಬಿದ್ದಿದೆ ಎಂದರೆ ನಿಮ್ಮ ಆಯಸ್ಸು ಹೆಚ್ಚಾಗಲಿದೆ ಎಂದರ್ಥ.
ಕಾಮಗಾರಿ ನಡೆಯುತ್ತಿರುವ ಕಟ್ಟಡ : ನಿಮ್ಮ ಕನಸಲ್ಲಿ ನೀವು ಏನಾದರೂ ಕಟ್ಟುತ್ತಿದ್ದೀರಾ ಅಂದರೆ ನಿಮ್ಮ ಕಾರ್ಯದಲ್ಲಿ ನೀವು ಯಶಸ್ಸನ್ನ ಸಾಧಿಸುತ್ತೀರಿ ಎಂಬರ್ಥವಿದೆ.
ಬಡವನಾದಂತೆ ಎನಿಸುವುದು : ನಿಮ್ಮ ಕನಸಿನಲ್ಲಿ ನೀವೇನಾದರೂ ಬಡವನಾದಂತೆ ಎನಿಸಿದ್ರೆ ಭಯಪಡಬೇಡಿ. ಡ್ರೀಮ್ ಸೈನ್ಸ್ನ ಪ್ರಕಾರ ಈ ರೀತಿ ಕನಸು ಬಿದ್ದರೆ ನಿಮ್ಮ ಆರ್ಥಿಕ ಸ್ಥಿತಿ ಶೀಘ್ರದಲ್ಲೇ ಸುಧಾರಿಸಲಿದೆ ಎಂಬರ್ಥಬಿದೆ.
ಹಲ್ಲಿ ಗೋಚರಿಸುವುದು : ಕನಸಿನಲ್ಲಿ ಹಲ್ಲಿ ಕಾಣೋದು ಸಹ ಆರ್ಥಿಕ ಲಾಭದ ಸಂಕೇತವಾಗಿದೆ.
ಹಾವು ಗುರಾಯಿಸೋದು : ಇದೊಂದು ರೀತಿಯಲ್ಲಿ ಭಯಾನಕ ಕನಸು ಎಂದು ನೀವು ಭಾವಿಸಿದ್ದಿರಬಹುದು. ಆದರೆ ಹಾವು ಕನಸಿನಲ್ಲಿ ಬಂದರೆ ಒಳ್ಳೆಯದಂತೆ. ಇದರಿಂದ ನಿಮ್ಮ ಜೀವನದಲ್ಲಿ ಯಶಸ್ಸು ಸಿಗಲಿದೆ.
ಗುಲಾಬಿ ಹೂ : ಕನಸಿನಲ್ಲಿ ಗುಲಾಬಿ ಹೂಗಳು ಕಾಣಿಸಿಕೊಂಡಲ್ಲಿ ನಿಮ್ಮ ಜೀವನದ ಅತೀ ದೊಡ್ಡ ಕನಸು ನನಸಾಗಲಿದೆ ಎಂದರ್ಥ.