ಕೆಲವೊಮ್ಮೆ ಸ್ನಾಯುಗಳಲ್ಲಿ ಕಾಣಿಸಿಕೊಳ್ಳುವ ನೋವು ನಡೆಯಲೂ ಆಗದ ಪರಿಸ್ಥಿತಿ ತಂದೊಡ್ಡಿ ವಿಪರೀತ ಸುಸ್ತು ಮಾಡುತ್ತದೆ. ಅಂತಹ ಸಂದರ್ಭಗಳಲ್ಲಿ ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಹೆಚ್ಚು ನೀರು ಕುಡಿಯುವುದು ಬಹಳ ಮುಖ್ಯ. ಬಿಗಿಯಾಗುವ ಸ್ನಾಯುಗಳು ಕೋಮಲವಾಗಲು ಹೆಚ್ಚು ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಿ.
ಸ್ನಾಯುಗಳ ಸಂಕುಚಿತವನ್ನು ಕಡಿಮೆ ಮಾಡಿ ಸೆಳೆತವನ್ನು ದೂರ ಮಾಡಲು ಬಾಳೆ ಹಣ್ಣನ್ನು ಸೇವಿಸಿ. ಇದರಲ್ಲಿರುವ ಪೊಟ್ಯಾಶಿಯಂ ನಿಮ್ಮ ಸುಸ್ತನ್ನು ದೂರ ಮಾಡುತ್ತದೆ. ಬಾಳೆಹಣ್ಣಿನ ಮಿಲ್ಕ್ ಶೇಕ್ ಮಾಡಿ ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಕ್ಯಾಲ್ಸಿಯಂ ಕೂಡಾ ಲಭ್ಯವಾಗುತ್ತದೆ.
ಸಾಸಿವೆ ಎಣ್ಣೆಯನ್ನು ಬಿಸಿ ಮಾಡಿ ಜಜ್ಜಿದ ಬೆಳ್ಳುಳ್ಳಿ ಹಾಕಿ. ಅದು ಕೆಂಪಾಗುತ್ತಲೇ ಚಿಟಿಕೆ ಕರ್ಪೂರ ಉದುರಿಸಿ. ತಣ್ಣಗಾದ ಬಳಿಕ ನೋವಿರುವ ಜಾಗಕ್ಕೆ ಮಸಾಜ್ ಮಾಡಿ. ಇದರಿಂದಲೂ ಸ್ನಾಯುಗಳ ನೋವು ಕಡಿಮೆಯಾಗುತ್ತದೆ.
ಇವೆಲ್ಲವುಗಳ ಹೊರತಾಗಿಯೂ ನೋವು ಕಡಿಮೆಯಾಗದಿದ್ದರೆ ನೀವು ವೈದ್ಯರನ್ನು ಸಂಪರ್ಕಿಸಿ. ಥೈರಾಯ್ಡ್ ಅಥವಾ ಇತರ ಸಮಸ್ಯೆಗಳ ಲಕ್ಷಣವಾಗಿಯೂ ಸ್ನಾಯುಗಳ ನೋವು ಕಾಣಿಸಿಕೊಂಡಿರಬಹುದು.