ಸ್ನಾನದ ನೀರಿನಲ್ಲಿ ತುಳಸಿ ಕಡ್ಡಿಯನ್ನು ಈ ರೀತಿ ಬಳಸಿದರೆ ಹುಡುಕಿಕೊಂಡು ಬರುತ್ತದೆ ಅದೃಷ್ಟ!

ತುಳಸಿ ಗಿಡವನ್ನು ಹಿಂದೂ ಧರ್ಮದಲ್ಲಿ ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. ಸಮುದ್ರ ಮಂಥನದ ಸಮಯದಲ್ಲಿ ಭೂಮಿಯ ಮೇಲೆ ಚೆಲ್ಲಿದ ಮಕರಂದದಿಂದ ತುಳಸಿ ಹುಟ್ಟಿಕೊಂಡಿದೆ ಎಂಬುದು ನಂಬಿಕೆ. ಇನ್ನೊಂದು ಕಥೆಯ ಪ್ರಕಾರ ವೃಂದಾ ಸತಿಯಾದ ನಂತರ ಭಸ್ಮದಿಂದ ಒಂದು ಸಸ್ಯವು ಹುಟ್ಟಿಕೊಂಡಿತು. ಅದಕ್ಕೆ ಭಗವಾನ್ ವಿಷ್ಣುವು ತುಳಸಿ ಎಂದು ಹೆಸರಿಟ್ಟರಂತೆ. ಅದಕ್ಕಾಗಿಯೇ ತುಳಸಿಯನ್ನು ಪೂಜನೀಯವೆಂದು ಪರಿಗಣಿಸಲಾಗಿದೆ.

ತುಳಸಿ ಗಿಡ ನೆಟ್ಟ ಮನೆಯಲ್ಲಿ ಸುಖ, ಸಮೃದ್ಧಿ, ಶಾಂತಿ ಮತ್ತು ಧನಾತ್ಮಕ ಶಕ್ತಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಗ್ರಂಥಗಳಲ್ಲಿ, ತುಳಸಿಯ ಎಲೆಗಳಿಂದ ಬೇರುಗಳವರೆಗೆ ಅದರ ಪ್ರಯೋಜನಗಳನ್ನು ವಿವರಿಸಲಾಗಿದೆ. ತುಳಸಿಯ ಕೆಲವೊಂದು ಪರಿಹಾರಗಳು ನಮ್ಮ ಅದೃಷ್ಟವನ್ನು ಬೆಳಗಿಸುತ್ತವೆ.

– ಶಾಸ್ತ್ರಗಳ ಪ್ರಕಾರ ತುಳಸಿಯನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡುವುದರಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ ಮತ್ತು ಧನಾತ್ಮಕ ಶಕ್ತಿ ಹರಡುತ್ತದೆ.

– ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸ್ನಾನದ ನೀರಿನಲ್ಲಿ ತುಳಸಿಯನ್ನು ಹಾಕಿದರೆ ವ್ಯಕ್ತಿಯು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುತ್ತಾನೆ. ಯಾವುದೇ ಸಮಸ್ಯೆ ಇದ್ದರೆ ಅದು ನಿವಾರಣೆಯಾಗುತ್ತದೆ.

– ಶಾಸ್ತ್ರಗಳ ಪ್ರಕಾರ ಸ್ನಾನದ ನೀರಿನಲ್ಲಿ ತುಳಸಿ ಕಡ್ಡಿಯನ್ನು ಹಾಕುವುದರಿಂದ ಮನಸ್ಸು ಶಾಂತವಾಗುತ್ತದೆ ಮತ್ತು ಉದ್ವೇಗ ದೂರವಾಗುತ್ತದೆ.

ತುಳಸಿ ಕಡ್ಡಿಯನ್ನು ಬಳಸುವುದು ಹೇಗೆ?

ತುಳಸಿ ಗಿಡದ ಕಡ್ಡಿಯನ್ನು ಸ್ನಾನದ ನೀರಿನಲ್ಲಿ ಸ್ವಲ್ಪ ಸಮಯ ಹಾಕಿಡಿ. ನಂತರ ಬಳಸಿದ ತುಳಸಿಯನ್ನು ತೆಗೆದು ಸ್ವಚ್ಛವಾದ ಜಾಗದಲ್ಲಿಟ್ಟು, ಆ ನೀರಿನಿಂದ ಸ್ನಾನ ಮಾಡಿ. ಬಳಸಿದ ತುಳಸಿಯನ್ನು ಬಾತ್‌ರೂಮ್‌ನಲ್ಲಿ ಬಿಡಬೇಡಿ ಇದರಿಂದ ಅದರ ಶುದ್ಧತೆಗೆ ಧಕ್ಕೆಯಾಗುತ್ತದೆ.

ಯಾವ ದಿನ ಮಾಡಬೇಕು ಈ ಪರಿಹಾರ? ಯಾವುದೇ ಅಮಾವಾಸ್ಯೆಯ ದಿನದಂದು ನೀವು ತುಳಸಿ ಕಡ್ಡಿಯನ್ನು ನೀರಿನಲ್ಲಿ ಹಾಕಿ ಸ್ನಾನ ಮಾಡಬಹುದು. ಅಮಾವಾಸ್ಯೆಯಂದು ಹೀಗೆ ಮಾಡಿದರೆ ನಿಮ್ಮ ಅದೃಷ್ಟವು ಬೆಳಗುತ್ತದೆ. ನೀವು ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುತ್ತೀರಿ ಮತ್ತು ಜೀವನದುದ್ದಕ್ಕೂ ಹಣ, ಧಾನ್ಯಗಳ ಕೊರತೆ ಇರುವುದಿಲ್ಲ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read