alex Certify ಸೌಂದರ್ಯ ಹೆಚ್ಚಿಸಲು ಬಳಸಿ ಈ ಆಮ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೌಂದರ್ಯ ಹೆಚ್ಚಿಸಲು ಬಳಸಿ ಈ ಆಮ್ಲ

ಚರ್ಮದ ರಕ್ಷಣೆಗೆ ಆಮ್ಲವನ್ನು ಬಳಸಲಾಗುತ್ತದೆ. ಕೆಲವು ಆಮ್ಲಗಳನ್ನು ಕ್ಲೆನ್ಸರ್, ಟೋನರ್ ಗಳಲ್ಲಿ ಬಳಸುತ್ತಾರೆ.

ಈ ಆಮ್ಲವನ್ನು ಸರಿಯಾದ ಪ್ರಮಾಣದಲ್ಲಿ ಬಳಸಿದರೆ ಚರ್ಮವನ್ನು ಸ್ಪಷ್ಟವಾಗಿ ಹೊಳೆಯುವಂತೆ ಮಾಡಬಹುದು.

ಹಾಗಾಗಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸುವ ಆಮ್ಲಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

*ಸಿಟ್ರಿಕ್ ಆಮ್ಲ : ಇದನ್ನು ಸಿಟ್ರಸ್ ಹಣ್ಣುಗಳ ಮೂಲಕ ಪಡೆಯಬಹುದು. ಇದು ಚರ್ಮದ ಸಮಸ್ಯೆಗಳನ್ನು ಪರಿಹರಿಸುತ್ತದೆ. ನಿಮ್ಮ ಚರ್ಮದ ಪಿಎಚ್ ಮಟ್ಟವನ್ನು ತಟಸ್ಥಗೊಳಿಸಲು ಇದು ಪರಿಣಾಮಕಾರಿಯಾಗಿದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಮೊಡವೆಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾಗಳನ್ನು ಇದು ಕೊಲ್ಲುತ್ತದೆ.

*ಲ್ಯಾಕ್ಟಿಕ್ ಆಮ್ಲ : ಇದು ಹಾಲಿನಿಂದ ತೆಗೆಯಲಾಗುತ್ತದೆ. ಇದು ತುಂಬಾ ಮೃದುವಾಗಿದ್ದು, ಚರ್ಮವನ್ನು ಕೋಮಲವಾಗಿಸಿ ಹೊಳೆಯುವಂತೆ ಮಾಡುತ್ತದೆ. ಇದು ಚರ್ಮವನ್ನು ತೇವಾಂಶಗೊಳಿಸುತ್ತದೆ. ಇದು ಸೂಕ್ಷ್ಮ ಚರ್ಮ ಹೊಂದಿರುವವರಿಗೆ ತುಂಬಾ ಒಳ್ಳೆಯದು, ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.

*ಸ್ಯಾಲಿಸಿಲಿಕ್ ಆಮ್ಲ : ಇದನ್ನು ಮೊಡವೆ ಚಿಕಿತ್ಸಾ ಉತ್ಪನ್ನಗಳಲ್ಲಿ ಬಳಸುತ್ತಾರೆ. ಇದು ಬ್ಯಾಕ್ಟೀರಿಯಾ ವಿರೋಧಿಯಾಗಿದೆ. ಮತ್ತು ಸತ್ತ ಚರ್ಮ ಕೋಶಗಳನ್ನು ನಿವಾರಿಸಲು ಸಹಕಾರಿಯಾಗಿದೆ. ಎಣ್ಣೆಯುಕ್ತ ಮತ್ತು ಮೊಡವೆ ಪೀಡಿತ ಚರ್ಮ ಹೊಂದಿರುವವರಿಗೆ ಇದು ಉತ್ತಮ.

*ಗ್ಲೈಕೊಲಿಕ್ ಆಮ್ಲ : ಇದು ತುಂಬಾ ಮೃದುವಾಗಿರುತ್ತದೆ. ಇದು ಚರ್ಮವನ್ನು ಅದ್ಭುತವಾಗಿ ಮಾಡುತ್ತದೆ. ಇದನ್ನು ವಾರಕ್ಕೆ 2 ಬಾರಿ ಬಳಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...