ನಿತ್ಯ ಅಡುಗೆ ಮನೆಯಲ್ಲಿ ಬಳಸುವ ಅಥವಾ ಹೊಟೇಲ್ ಗಳಲ್ಲಿ ಊಟದ ಬಳಿಕ ಬಾಯಿಯಾಡಿಸಲು ಕೊಡುವ ಸೋಂಪು ಜೀರ್ಣಕ್ರೀಯೆಯನ್ನು ಸರಾಗಗೊಳಿಸುವುದರೊಂದಿಗೆ ಉಸಿರಿನ ದುರ್ಗಂಧವನ್ನು ನಿವಾರಿಸುತ್ತದೆ.
ಮಿಕ್ಸಿಗೆ 1 ಚಮಚ ಸೋಂಪಿನ ಕಾಳುಗಳನ್ನು ಹಾಕಿ ಪುಡಿ ಮಾಡಿಕೊಳ್ಳಿ. ಇದನ್ನು ಎರಡು ಲೋಟ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ನಂತರ ಬಾಯಿ ಮಕ್ಕಳಿಸಿದರೆ ಬಾಯಿಯ ದುರ್ಗಂಧ ದೂರವಾಗುತ್ತದೆ ಮಾತ್ರವಲ್ಲ, ಕಟ್ಟಿದ ಮೂಗು ಗಂಟಲ ಕಿರಿಕಿರಿಯೂ ದೂರವಾಗುತ್ತದೆ.
ಸೋಂಪು ಪುಡಿ ಸೇರಿಸಿದ ಕಷಾಯ ಕುಡಿಯುವುದರಿಂದ ಅಸ್ತಮಾ ರೋಗಿಗಳಿಗೆ ಬಹಳ ಒಳ್ಳೆಯದು. ತೆಳ್ಳಗಾಗಬೇಕೆಂಬ ಬಯಕೆ ಇದ್ದವರು ಸೋಂಪನ್ನು ಪುಡಿಮಾಡಿ ನೀರಿನಲ್ಲಿ ಕುದಿಸಿ ತುಸು ಬೆಲ್ಲ ಸೇರಿಸಿ ಊಟಕ್ಕೆ ಮುನ್ನ ಕುಡಿಯಿರಿ. ಇದರಿಂದ ಹೊಟ್ಟೆ ತುಂಬಿದ ಅನುಭವ ಮಾತ್ರವಲ್ಲ ಕಡಿಮೆ ಆಹಾರ ತಿನ್ನಲು ಕಾರಣವಾಗುತ್ತದೆ. ಹಾಗಾಗಿ ದಿನಕ್ಕೊಮ್ಮೆ ಅಥವಾ ಎರಡು ಬಾರಿ ಸೋಂಪಿನ ಕಷಾಯ ತಯಾರಿಸಿ ಕುಡಿಯಿರಿ.
ಇದಕ್ಕೆ ಎರಡು ಚಮಚ ಜೀರಿಗೆ ಸೇರಿಸಿ ಹುರಿದು ಮಿಕ್ಸಿಯಲ್ಲಿ ರುಬ್ಬಿ ಇಟ್ಟುಕೊಳ್ಳಿ. ಹೊಟ್ಟೆನೋವು, ಆ್ಯಸಿಡಿಟಿ ಕಾಡಿದಾಗಲೂ ಇದರ ಕಷಾಯ ಉಪಯೋಗಕ್ಕೆ ಬರುತ್ತದೆ. ಹದಿಹರೆಯದ ವಯಸ್ಸಿನಲ್ಲಿ ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆ ಬೆನ್ನು ನೋವು ಶಮನಕ್ಕೂ ಇದು ಉಪಕಾರಿ. ಹೀಗೆ ತಯಾರಿಸುವ ಕಷಾಯಕ್ಕೆ ಬೆಲ್ಲದ ಬದಲು ಚಿಟಿಕೆ ಉಪ್ಪು ಬೆರೆಸುವುದು ಒಳ್ಳೆಯದು.